* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಬೆಂಗಳೂರು ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ (ಸಿಜಿಎಂ) ಆಗಿ ಜೂಹಿ ಸ್ಮಿತಾ ಸಿನ್ಹಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.* ಇದಕ್ಕೂ ಮೊದಲು ಬ್ಯಾಂಕ್‌ನ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕಿ, ಮುಂಬೈನ ಕಾರ್ಪೊರೇಟ್ ಕಚೇರಿಯ ಸಾಂಸ್ಥಿಕ ಯೋಜನೆ, ವ್ಯವಸ್ಥೆ ಮತ್ತು ಕಾರ್ಯ ವಿಧಾನ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಸ್ಮಿತಾ ಅವರು ಕಾರ್ಯ ನಿರ್ವಹಿಸಿದ್ದಾರೆ.* 1995ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸಿದ ಸ್ಮಿತಾ ಅವರು ರಿಟೇಲ್ ಬ್ಯಾಂಕಿಂಗ್, ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ 29 ವರ್ಷಕ್ಕೂ ಹೆಚ್ಚು ಸೇವಾನುಭವ ಹೊಂದಿದ್ದಾರೆ.* ಕರ್ನಾಟಕ ರಾಜ್ಯದಲ್ಲಿ ಎಸ್‌ಬಿಐ 1,700ಕ್ಕೂ ಹೆಚ್ಚು ಶಾಖೆ/ ಕಚೇರಿಗಳನ್ನು ಹೊಂದಿದೆ. 4.90 ಲಕ್ಷ ಕೋಟಿಗೂ ಅಧಿಕ ಜಮಾ- ಖರ್ಚು ಪಟ್ಟಿ (ಬ್ಯಾಲೆನ್ಸ್ ಶೀಟ್) ಹೊಂದಿದೆ ಎಂದು ಬ್ಯಾಂಕ್ ತಿಳಿಸಿದೆ.