* ಈಶಾನ್ಯ ಕರಕುಶಲ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮ (NEHHDC) ಜರ್ಮನಿಯ ಓಕೊ-ಟೆಕ್ಸ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಈ ಪ್ರಮಾಣೀಕರಣವು ಎರಿ ರೇಷ್ಮೆ ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸುತ್ತದೆ, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇದರ ಸ್ವೀಕಾರವನ್ನು ಸುಗಮಗೊಳಿಸುತ್ತದೆ.ಏರಿ ರೇಷ್ಮೆ ವಲಯದ ಅಭಿವೃದ್ಧಿಗೆ ಸರ್ಕಾರದ ಕ್ರಮಗಳು* ಏರಿ ರೇಷ್ಮೆ ವಲಯವು ಅಸಂಘಟಿತವಾಗಿರುವುದರಿಂದ, ಸರ್ಕಾರ ಇದರ ಬೆಳವಣಿಗೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.- ಅಸ್ಸಾಂನ ಲಹ್ದೋಯ್ಗಢದಲ್ಲಿ ಕೇಂದ್ರೀಯ ಮುಗಾ ಮತ್ತು ಎರಿ ಸಂಶೋಧನಾ ಸಂಸ್ಥೆ ಸ್ಥಾಪಿಸಲಾಗಿದೆ.- ತಂತ್ರಜ್ಞಾನ ನವೀಕರಣ, ಸಂಶೋಧನೆ ಮತ್ತು ಉತ್ಪಾದನಾ ಬೆಳವಣಿಗೆಗೆ ಕೇಂದ್ರ ರೇಷ್ಮೆ ಮಂಡಳಿ ಕಾರ್ಯನಿರ್ವಹಿಸುತ್ತಿದೆ.- ಗುಣಮಟ್ಟದ ಎರಿ ರೇಷ್ಮೆ ಹುಳು ಬೀಜ ಪೂರೈಕೆಗಾಗಿ ಮುಗಾ ಎರಿ ರೇಷ್ಮೆ ಹುಳು ಬೀಜ ಸಂಸ್ಥೆ ಸ್ಥಾಪನೆಯಾಗಿದೆ.- ದೇಶದ ರೇಷ್ಮೆ ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ "ರೇಷ್ಮೆ ಸಮಗ್ರ -2" ಯೋಜನೆಯನ್ನು 2021-22 ರಿಂದ 2025-26 ರವರೆಗೆ ಜಾರಿಗೊಳಿಸಲಾಗುತ್ತಿದೆ.* ಈ ಮಾಹಿತಿಯನ್ನು ರಾಜ್ಯಸಭೆಯಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.