* ಭಾನುವಾರ(ಮೇ 18) ಬೆಳಗ್ಗೆ 5:59ಕ್ಕೆ ಇಸ್ರೋದ 101ನೇ ರಾಕೆಟ್ ಉಡಾವಣೆಯಾಗಿದ್ದು, EOS-09 ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿಸಲಾಯಿತು.* 1,696 ಕಿಲೋಗ್ರಾಂ ತೂಕದ ಉಪಗ್ರಹವು ಭೂಮಿಯಿಂದ 500 ಕಿಮೀ ಎತ್ತರದ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಯಿತು.* ಮೂರನೇ ಹಂತದಲ್ಲಿ ಒತ್ತಡ ಕುಸಿತವಾಗಿದ್ದರಿಂದ ಕಕ್ಷೆ ಪ್ರವೇಶ ಸಾಧ್ಯವಾಗಲಿಲ್ಲ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣ ತಿಳಿಸಿದ್ದಾರೆ.* ಬೆಂಗಳೂರು ಮೂಲದ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಈ ಗೂಢಚಾರ ಉಪಗ್ರಹ ನಿರ್ಮಿಸಲಾಗಿತ್ತು.* ಉಪಗ್ರಹದಲ್ಲಿದ್ದ ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿ ಹಗಲು-ರಾತ್ರಿಯಲ್ಲೂ ಭೂಮಿಯ ಸ್ಪಷ್ಟ ಚಿತ್ರಣ ಸೆರೆಹಿಡಿಯುವ ಸಾಮರ್ಥ್ಯ ಹೊಂದಿತ್ತು.* 10 ರಿಂದ 225 ಕಿಮೀ ವ್ಯಾಪ್ತಿಯ ಸ್ಕ್ಯಾನಿಂಗ್ ಮೂಲಕ ಪ್ರವಾಹ, ಚಂಡಮಾರುತ, ಭೂಕುಸಿತದ ನೈಜ ಚಿತ್ರಣ, ಗಡಿ ಮತ್ತು ಸಮುದ್ರ ಚಟುವಟಿಕೆಗಳ ಮೇಲ್ವಿಚಾರಣೆಯಲ್ಲೂ ಉಪಯೋಗವಾಗುತ್ತಿದ್ದ ಉಪಗ್ರಹ ಉಪಗ್ರಹವಾಗಿದೆ.* ರಾಷ್ಟ್ರೀಯ ಭದ್ರತೆಗೆ ಅನೇಕ ರೀತಿಯಲ್ಲಿ ಸಹಾಯ ಮಾಡಬಹುದಾದ ಶಕ್ತಿಶಾಲಿ ಉಪಗ್ರಹವಿದು.