* ಕರ್ನಾಟಕದ ಎನ್.ವಿ.ಅಂಜಾರಿಯಾ, ಗುವಾಹಟಿಯ ವಿಜಯ್ ಬಿಷ್ಣೋಯ್ ಮತ್ತು ಬಾಂಬೆ ಹೈಕೋರ್ಟ್ನ ಎ.ಎಸ್.ಚಂದೂರ್ಕರ್ ಅವರು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ಸುಪ್ರೀಂ ಕೋರ್ಟ್ಗೆ ಮೂವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಮೇ 26 ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಐವರು ಸದಸ್ಯರ ಕೊಲಿಜಿಯಂ ಶಿಫಾರಸು ಮಾಡಿತ್ತು.* ಈ ಶಿಫಾರಸ್ಸಿಗೆ ಮೇ 29 ರಂದು ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಇದರೊಂದಿಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಹೆಚ್ಚಾಗಿದೆ.