* ಅಮೆರಿಕದ ಪ್ರಮುಖ ಆರೋಗ್ಯ ಸಂಶೋಧನೆ ಮತ್ತು ಧನಸಹಾಯ ಸಂಸ್ಥೆ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್’ (ಎನ್ಐಎಚ್) ಹೊಸ ನಿರ್ದೇಶಕರಾಗಿ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಜಯ್ ಭಟ್ಟಾಚಾರ್ಯ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.* ಭಟ್ಟಾಚಾರ್ಯ ಅವರ ನೇಮಕವನ್ನು ಅಮೆರಿಕ ಕಾಂಗ್ರೆಸ್ 53-47 ಮತಗಳ ಅಂತರದಲ್ಲಿ ಅನುಮೋದಿಸಿದೆ.* ಪ್ರಸ್ತುತ, ಭಟ್ಟಾಚಾರ್ಯ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ನೀತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.* ಅವರ ನೇಮಕಕ್ಕೆ ಸ್ಟ್ಯಾನ್ಫೋರ್ಡ್ ಮೆಡಿಸಿನ್ ಸಂತೋಷ ವ್ಯಕ್ತಪಡಿಸಿದ್ದು, ಭಟ್ಟಾಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸಿದೆ.* ಕಳೆದ ನವೆಂಬರ್ನಲ್ಲಿ, ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ, ಡೊನಾಲ್ಡ್ ಟ್ರಂಪ್ ಭಟ್ಟಾಚಾರ್ಯ ಅವರನ್ನು ‘ಎನ್ಐಎಚ್’ನ 18ನೇ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದರು.* ಡಾ. ಭಟ್ಟಾಚಾರ್ಯ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರೊಂದಿಗೆ ವೈದ್ಯಕೀಯ ಸಂಶೋಧನೆಗೆ ನೇತೃತ್ವ ನೀಡಲು ಹಾಗೂ ಆರೋಗ್ಯ ಸುಧಾರಣೆ ಮತ್ತು ಜೀವರಕ್ಷಕ ಆವಿಷ್ಕಾರಗಳನ್ನು ಬೆಂಬಲಿಸಲು ಶ್ರಮಿಸುವರು ಎಂದು ಆಗ ಟ್ರಂಪ್ ಹೇಳಿದ್ದರು.