* ದೆಹಲಿಯ ಭಾರತ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂಡಿಯಾ ರ‍್ಯಾಂಕಿಂಗ್-2024 ರ ಪಟ್ಟಿಯನ್ನು ಆಗಸ್ಟ್ 12 ರಂದು ಬಿಡುಗಡೆಗೊಳಿಸಿದರು. * ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಸತತ 9ನೇ ವರ್ಷವೂ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆ ಗೊಳಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ-2024ರ (ಎನ್‌ಐ ಆರ್‌ಎಫ್) ಪಟ್ಟಿಯಲ್ಲಿ ಘೋಷಿಸಲಾಗಿದೆ.* ದೇಶದ ಟಾಪ್ ಶಿಕ್ಷಣ ಸಂಸ್ಥೆಗಳ ಪಟ್ಟಿಯು ಎನ್‌ಐಆರ್ ಎಫ್‌ನ 9ನೇ ಆವೃತ್ತಿಯಾಗಿದ್ದು, ಅತ್ಯುತ್ತಮ ಹತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸತತ 9ನೇ ವರ್ಷವೂ ಐಐಟಿ ಮದ್ರಾಸ್ ಅಗ್ರಸ್ಥಾನ ಉಳಿಸಿಕೊಂಡಿದೆ. * ಬೆಂಗಳೂರಿನ ಐಐಎಸ್‌ಸಿ ಸಮಗ್ರ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಬಾರಿಯೂ ಐಐಎಸ್‌ಸಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟು 16 ವಿಭಾಗಗಳಲ್ಲಿ ರ‍್ಯಾಂಕಿಂಗ್ ಪ್ರಕಟಿಸಲಾಗಿದೆ. * ಐಐಟಿ ಬಾಂಬೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಐಐಟಿ ದೆಹಲಿ ಸಂಸ್ಥೆಯು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಹತ್ತು ಸ್ಥಾನಗಳಲ್ಲಿ ಎಂಟು ಐಐಟಿ ಸಂಸ್ಥೆಗಳು ಸ್ಥಾನ ಪಡೆದಿದ್ದು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) 10ನೇ ಸ್ಥಾನ ಪಡೆದಿವೆ.* ದೇಶದ 10 ಅಗ್ರ ಕಾಲೇಜುಗಳಲ್ಲಿ ದೆಹಲಿಯ ಆರು ಕಾಲೇಜುಗಳು ಅಗ್ರಸ್ಥಾನದಲ್ಲಿದ್ದು. ಮಿರಾಂಡಾ ಕಾಲೇಜು ಎರಡನೇ ಸ್ಥಾನಕ್ಕಿಳಿದಿದೆ. ಮೂರನೇ ಸೇಂಟ್ ಸ್ಟಿಫನ್ಸ್‌ ಕಾಲೇಜಿದ್ದು, ಮೂರೂ ಸ್ಥಾನಗಳು ದೆಹಲಿ ಪಾಲಾಗಿವೆ.* ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿಯು (ಎನ್‌ಐಆರ್‌ಎಫ್) ಜುಲೈ 12 ರಂದು (ಸೋಮವಾರ) ಪ್ರಕಟಿಸಿದ ರಾಷ್ಟ್ರೀಯ ಶ್ರೇಯಾಂಕದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು (ಜೆಎಸ್ಎಸ್‌- ಎಎಚ್‌ಇಆರ್) 24ನೇ ಸ್ಥಾನಕ್ಕೇರಿದೆ.* ದೇಶದ ಟಾಪ್ ಶಿಕ್ಷಣ ಸಂಸ್ಥೆಗಳು (ಸಮಗ್ರ ವಿಭಾಗ) :1. ಐಐಟಿ ಮದ್ರಾಸ್2. ಐಐಎಸ್‌ಸಿ, ಬೆಂಗಳೂರು3. ಐಐಟಿ ಬಾಂಬೆ 4. ಐಐಟಿ ದೆಹಲಿ 5. ಐಐಟಿ ಕಾನ್ಸುರ್6. ಐಐಟಿ ಖರಗ್‌ಪುರ್7. ಏಮ್ಸ್ ದೆಹಲಿ8. ಐಐಟಿ ರೂರ್ಕಿ9. ಐಐಟಿ ಗುವಾಹಟಿ10. ಜೆಎನ್‌ಯು ದೆಹಲಿ