* ಭಾರತೀಯ ಕ್ರಿಕೆಟ್ ತಂಡದ ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಗುರುವಾರ (ಆಗಸ್ಟ್ 04)ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆ ಮೂಲಕ, ತಮ್ಮ25 ವರ್ಷಗಳ ಅಂತರರಾಷ್ಟ್ರೀಯ, ದೇಶೀಯ ಮತ್ತು ಫ್ರಾಂಚೈಸಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.* 42 ವರ್ಷದ ಮಿಶ್ರಾ ಅವರು ಭಾರತ ಪರ 22 ಟೆಸ್ಟ್, 36 ಏಕದಿನ, 10 ಟಿ20 ಪಂದ್ಯಗಳಲ್ಲಿ ಆಡಿದ್ದು, ಒಟ್ಟು 156 ಅಂತರರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ.* 2013ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 18 ವಿಕೆಟ್ ಪಡೆದು ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸಮನಾಗಿಸಿದ್ದರು.* ಐಪಿಎಲ್ನಲ್ಲಿ ಮಿಶ್ರಾ 162 ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದು, ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.* ಅಮಿತ್ ಮಿಶ್ರಾ, 2008ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 18 ವಿಕೆಟ್ಗಳನ್ನು ಪಡೆಯುವ ಮೂಲಕ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.* 2008 ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್, 2011 ರಲ್ಲಿ ಪಂಜಾಬ್ ಮತ್ತು 2013 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮೂರು ಐಪಿಎಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ.* ಭಾರತ ತಂಡದ ಪರವಾಗಿ ಕೊನೆಯದಾಗಿ 2017ರಲ್ಲಿ ಆಟವಾಡಿದ್ದ 42 ವರ್ಷದ ಹರ್ಯಾಣ ಕ್ರಿಕೆಟಿಗ ಅಮಿತ್ ಮಿಶ್ರಾ, ನಂತರ 2024ರ ಐಪಿಎಲ್ ಆವೃತ್ತಿವರೆಗೂ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದರು.* ತಮ್ಮ ನಿವೃತ್ತಿಯನ್ನು ದೃಢಪಡಿಸಿರುವ ಅಮಿತ್ ಮಿಶ್ರಾ, “ನಾನು ನಿವೃತ್ತಿಯಾಗಲು ನಿರ್ಧರಿಸಿದ್ದೇನೆ” ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.* ನಿವೃತ್ತಿ ಘೋಷಣೆಯ ವೇಳೆ, ತಮ್ಮ ಸಹ ಆಟಗಾರರು, ಬಿಸಿಸಿಐ, ಹರಿಯಾಣ ಕ್ರಿಕೆಟ್ ಸಂಸ್ಥೆ, ಕುಟುಂಬ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕ್ರಿಕೆಟ್ ತಮಗೆ ಅನೇಕ ನೆನಪುಗಳು ಮತ್ತು ಅಮೂಲ್ಯ ಪಾಠಗಳನ್ನು ನೀಡಿದೆಯೆಂದು ಅವರು ಭಾವನಾತ್ಮಕವಾಗಿ ತಿಳಿಸಿದ್ದಾರೆ.