Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರು: ರಾಜ್ಯ ಸರ್ಕಾರದ ದೊಡ್ಡ ನಿರ್ಧಾರ
Authored by:
Akshata Halli
Date:
28 ಜನವರಿ 2026
➤
ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯೊಂದು ಬರಲಿದ್ದು, ಕರ್ನಾಟಕದ ಎಲ್ಲಾ
6,000ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿಗೆ
'ರಾಷ್ಟ್ರಪಿತ ಮಹಾತ್ಮ ಗಾಂಧೀಜಿ' ಅವರ ಹೆಸರನ್ನು ಇಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ನಿರ್ಧಾರವು ಕೇವಲ ನಾಮಕರಣಕ್ಕೆ ಸೀಮಿತವಾಗಿರದೆ, ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ' ಕನಸನ್ನು ಸಾಕಾರಗೊಳಿಸುವ ಒಂದು ಹೆಜ್ಜೆಯಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಮುಂಬರುವ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ ಮಾಡಲಾಗುವುದು.
➤ ಮನರೇಗಾ (MGNREGA) ಮತ್ತು ಗಾಂಧಿ ತತ್ವಗಳ ಸಂಘರ್ಷ:
ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಗಾಂಧೀಜಿಯವರ ಹೆಸರಿನಲ್ಲಿರುವ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)
ಬಗ್ಗೆ ಪ್ರಸ್ತಾಪಿಸಿದರು:
=>
ಉದ್ಯೋಗದ ಹಕ್ಕು:
ಬಡ ಜನರಿಗೆ ಕೆಲಸ ನೀಡುವ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
=>
ರಾಜಕೀಯ ಸಂಘರ್ಷ:
ಗಾಂಧೀಜಿಯವರನ್ನು ಹತ್ಯೆ ಮಾಡಿದ ವಿಚಾರ ಮತ್ತು ಪ್ರಸ್ತುತ ಯೋಜನೆಯ ಅನುದಾನ ಕಡಿತದ ವಿಚಾರವಾಗಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
-
73ನೇ ಸಾಂವಿಧಾನಿಕ ತಿದ್ದುಪಡಿ:
ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಮಾನ್ಯತೆ ನೀಡಿದ ತಿದ್ದುಪಡಿ.
-
ಮನರೇಗಾ (MGNREGA):
ಈ ಯೋಜನೆಯನ್ನು
2005
ರಲ್ಲಿ ಜಾರಿಗೆ ತರಲಾಯಿತು (ಆಗಸ್ಟ್ 25, 2005 ರಂದು ಕಾಯ್ದೆ ಅಂಗೀಕಾರವಾಯಿತು).
-
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ:
1993ರ ಕಾಯ್ದೆಯಡಿ ಕರ್ನಾಟಕದಲ್ಲಿ ಪಂಚಾಯತ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ.
➤
ಗ್ರಾಮ ಸ್ವರಾಜ್ಯ'ಕ್ಕೆ ಬಲ ತುಂಬುವ ಪ್ರಯತ್ನ:
ಹಳ್ಳಿಗೊಂದು ಶಾಲೆ, ಸಹಕಾರ ಸಂಘ ಮತ್ತು ಪಂಚಾಯತ್ ಇರಬೇಕು ಎಂಬುದು ಗಾಂಧೀಜಿಯವರ ಮೂಲ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅವರ ಹೆಸರಿಡುವುದು ಸಾಂಕೇತಿಕವಾಗಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ರಾಜ್ಯ ಸರ್ಕಾರ ನಂಬಿದೆ.
Take Quiz
Loading...