* ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ತನ್ನ ಸೇವೆಗಳನ್ನ ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ಸುಲಭಗೊಳಿಸಲು "ಒನ್ ಮ್ಯಾನ್ ಆಫಿಸ್" ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ಪ್ರಾರಂಭಿಸಿದೆ.* ಎಲ್ಐಸಿ ತನ್ನ ಏಜೆಂಟರು ಮತ್ತು ಮಾರಾಟ ತಂಡಕ್ಕಾಗಿ 'ಒನ್ ಮ್ಯಾನ್ ಆಫೀಸ್' (ಒಎಂಒ) ಡಿಜಿಟಲ್ ಸೌಲಭ್ಯವನ್ನು ಪ್ರಾರಂಭಿಸಿತು, ಇದು ಅವರ ಮೊಬೈಲ್ ಫೋನ್ಗಳಿಂದಲೇ ಎಲ್ಲಾ ವಿಮಾ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.* ಎಲ್ಐಸಿ ಸಿಇಒ ಮತ್ತು ಎಂಡಿ ಸಿದ್ಧಾರ್ಥ ಮೊಹಾಂತಿ ಅವರು ಇದನ್ನು '2047 ರ ವೇಳೆಗೆ ಎಲ್ಲರಿಗೂ ವಿಮೆ' ಮಿಷನ್ ಅನ್ನು ಬಲಪಡಿಸುವ ಮತ್ತು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಗೇಮ್ ಚೇಂಜರ್ ಎಂದು ಕರೆದರು.* ಒಎಮ್ಒ ( ಒನ್ ಮ್ಯಾನ್ ಆಫೀಸ್) ಸೇವೆಯನ್ನು ಎಲ್ಐಸಿ ಮೊಬೈಲ್ ಡಿಜಿಟಲ್ ಆಫೀಸ್ ಎಂದು ವಿಶ್ಲೇಶಿಸಿದ್ದು ಮೊಬೈಲ್ ಫೋನ್ ಮೂಲಕ ಎಲ್ಐಸಿಯ ಎಲ್ಲಾ ಸೇವೆಯನ್ನು ಪಡೆಯಲು ಏಕ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. * ಈ ಸೇವೆ ಎಲ್ಐಸಿಯ ಆನಂದ (ಆತ್ಮ ನಿರ್ಭರ ಏಜೆಂಟ್ಸ್ ನ್ಯೂ ಬುಸಿನೆಸ್ ಡಿಜಿಟಲ್ ಆಪ್ಲಿಕೇಶನ್) ಆಧರಿಸಿ ರಚಿಸಲಾಗಿದ್ದು, ಇದು ಏಜೆಂಟ್ಗಳಿಗೆ ಹೊಸ ಗ್ರಾಹಕರನ್ನು ಪಡೆಯಲು ನೆರವಾಗಲಿದೆ. ಜತೆಗೆ ಯೋಜನೆಗಳ ಪ್ರೀಮಿಯಂ ಲೆಕ್ಕಚಾರ, ಸೇವೆಯ ಲಾಭಗಳ ಮಾಹಿತಿ, ಇ-ಎನ್ಎಸಿಹೆಚ್ ನೋಂದಣಿ, ವಿಳಾಸ ಬದಲಾಯಿಸುವ ಸೌಲಭ್ಯ, ಆನ್ಲೈನ್ ಸಾಲ ಅರ್ಜಿ, ಪ್ರೀಮಿಯಂ ಪಾವತಿ ರಿನಿವಲ್, ಹಾಗೂ ಕಾಗದ ಪತ್ರಗಳನ್ನು ಸಲ್ಲಿಸುವ ಅವಕಾಶ ಸೇರಿ ಹಲವು ಸೌಲಭ್ಯವನ್ನು ಇಲ್ಲಿ ಪಡೆಯಬಹುದಾಗಿದೆ.