* ‘ಸ್ಪೇಸ್ ಎಕ್ಸ್’ ಸಿಇಒ ಹಾಗೂ ಅಮೆರಿಕದ ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.* 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಅವರ ನಾಮನಿರ್ದೇಶನ ಪರವಾದ ಅರ್ಜಿಯನ್ನು ನಾರ್ವೆ ನೊಬೆಲ್ ಸಮಿತಿಗೆ ಸಲ್ಲಿಸಲಾಗಿದೆ ಎಂಬುದನ್ನು ಯೂರೋಪ್ ಸಂಸತ್ ಸದಸ್ಯ ಬ್ರಾಂಕೊ ಗ್ರಿಮ್ಸ್ ದೃಢಪಡಿಸಿದ್ದಾರೆ.* ವಾಕ್ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಪರವಾದ ಅವರ ಕೊಡುಗೆಗಳನ್ನು ಗುರುತಿಸಿ ಈ ನಾಮನಿರ್ದೇಶನವನ್ನು ಮಾಡಲಾಗಿದೆ ಎಂದು ಗ್ರಿಮ್ಸ್ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.* ಎಲಾನ್ ಮಸ್ಕ್ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನ ಮಾಲಕರಾಗಿದ್ದಾರೆ.* ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ ನಂತರ ಎಲಾನ್ ಮಸ್ಕ್ ಅವರು ಟ್ರಂಪ್ ಆಡಳಿತದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ.