* ಎಲಾನ್ ಮಸ್ಕ್ ಅವರು ವಿಕಿಪೀಡಿಯಾಕ್ಕೆ ಪರ್ಯಾಯವಾಗಿ ‘ಗ್ರೋಕಿಪೀಡಿಯಾ’ ಎಂಬ ಹೊಸ ವೇದಿಕೆಯನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಆರಂಭಿಕ ಆವೃತ್ತಿ ಮುಂದಿನ ಎರಡು ವಾರಗಳಲ್ಲಿ ಬಿಡುಗಡೆಯಾಗಲಿದೆ.* ಮಸ್ಕ್ ಹೇಳುವಂತೆ, ಗ್ರೋಕಿಪೀಡಿಯಾ ಎಐ ತಂತ್ರಜ್ಞಾನವನ್ನು ಬಳಸಿ, ಯಾವುದೇ ಮಿತಿಯಿಲ್ಲದೆ ವಿಶ್ವದ ಅತ್ಯಂತ ನಿಖರ ಮತ್ತು ಮುಕ್ತ ಜ್ಞಾನ ಮೂಲವಾಗಲಿದೆ.* ಅವರು ವಿಕಿಪೀಡಿಯಾವನ್ನು ಎಡಪಂಥೀಯರು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿ, ದೇಣಿಗೆ ನೀಡಬೇಡಿ ಎಂದು ಸಾರ್ವಜನಿಕವಾಗಿ ಕರೆ ನೀಡಿದ್ದಾರೆ. ವಿಕಿಪೀಡಿಯಾ ತಟಸ್ಥತೆ ಕಳೆದುಕೊಂಡಿದೆ ಮತ್ತು ಪಕ್ಷಪಾತ ತಾಳುತ್ತಿದೆ ಎಂದು ಮಸ್ಕ್ ಟೀಕಿಸಿದ್ದಾರೆ.* ಇಸ್ರೇಲ್–ಹಮಾಸ್ ಯುದ್ಧದ ಲೇಖನಗಳಲ್ಲಿ ವಿಕಿಪೀಡಿಯಾ ಸಂಪಾದಕರು ಹಮಾಸ್ ಪರವಾಗಿ ಬರೆದಿದ್ದಾರೆ ಮತ್ತು ಇಸ್ರೇಲ್ ವಿರುದ್ಧ ವ್ಯಾಖ್ಯಾನ ಬದಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.* ಇದಲ್ಲದೆ, ಇರಾನ್ ಸರ್ಕಾರದ ಮಾನವ ಹಕ್ಕು ಉಲ್ಲಂಘನೆಗಳ ಉಲ್ಲೇಖಗಳನ್ನು ಅಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.