* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉದ್ಯಮಿ ಇಲಾನ್ ಮಸ್ಕ್ ಸ್ಥಾಪಿಸಿರುವ ಹೊಸ ರಾಜಕೀಯ ಪಕ್ಷವನ್ನು ಹಾಸ್ಯಾಸ್ಪದವೆಂದು ಲೇವಡಿ ಮಾಡಿದ್ದಾರೆ.* ಮಸ್ಕ್ ಅವರು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳಿಗೆ ಪರ್ಯಾಯವಾಗಿ ‘ಅಮೆರಿಕನ್ ಪಕ್ಷ’ ಎಂಬ ಹೊಸ ರಾಜಕೀಯ ವೇದಿಕೆಯನ್ನು ಘೋಷಿಸಿದ್ದು, ಇದನ್ನು ಟ್ರಂಪ್ ಕಟು ಟೀಕಿಸಿದ್ದಾರೆ.* ಟ್ರಂಪ್ ಅವರು ಹೇಳಿರುವಂತೆ, ಅಮೆರಿಕದ ರಾಜಕೀಯದಲ್ಲಿ ಕೇವಲ ಎರಡು ಪಕ್ಷಗಳ ವ್ಯವಸ್ಥೆಯೇ ಅಸ್ತಿತ್ವದಲ್ಲಿರುತ್ತದೆ.* ಮೂರನೇ ಪಕ್ಷದ ಸ್ಥಾಪನೆ ಜನರಲ್ಲಿ ಗೊಂದಲ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.* ‘ಟ್ರೂಥ್’ ಸಾಮಾಜಿಕ ಜಾಲತಾಣದಲ್ಲೂ ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಟ್ರಂಪ್, “ಇಲಾನ್ ಮಸ್ಕ್ ದಾರಿ ತಪ್ಪಿದ್ದಾರೆ. ಮೂರನೇ ಪಕ್ಷದಿಂದ ಅವರಿಗೆ ಯಶಸ್ಸು ದೊರಕದು” ಎಂದು ಸ್ಪಷ್ಟಪಡಿಸಿದ್ದಾರೆ.