* ಲಿಂಡಾ ಯಾಕರಿನೊ (Linda Yaccarino ) ಎಲಾನ್ ಮಸ್ಕ್ (Elon Musk) ಒಡೆತನದ ಎಕ್ಸ್ ಸಾಮಾಜಿಕ ಜಾಲತಾಣ ಸಂಸ್ಥೆಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.* ಲಿಂಡಾ ಯಾಕರಿನೊ ಕಳೆದ 2 ವರ್ಷಗಳಿಂದ ಎಕ್ಸ್ ಸಂಸ್ಥೆಯ ಸಿಇಒ ಹುದ್ದೆಯಲ್ಲಿದ್ದರು.* 2023ರ ಜೂನ್ ನಲ್ಲಿ ಟ್ವಿಟರ್ನ ಸಿಇಒ ಆಗಿ ಲಿಂಡಾ ಯಾಕಾರಿನೊ ಅವರು ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಅವರು 2011ರಿಂದಲೂ ಎನ್ ಬಿ ಸಿ ಯೂನಿವರ್ಸಲ್ ನ ಜಾಹೀರಾತು ಮತ್ತು ಪಾಲುದಾರಿಕೆ ವಿಭಾಗದ ಕಾರ್ಯ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. * 2022ರಲ್ಲಿ ಟ್ವಿಟರ್ ಖರೀದಿಸಿದ್ದ ಮಸ್ಕ್, ಸಿಇಒ ಆಗಿದ್ದ ಭಾರತದ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿ ತಾವೇ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಆರು ವಾರಗಳ ಬಳಿಕ ಲಿಂಡಾ ಸಿಇಒ ಆಗಿ ಅಧಿಕಾರ ಸ್ವೀಕರಿದ್ದರು.