* 'ಎಜುಕೇಟ್ ಗರ್ಲ್ಸ್’ ಎಂಬ ಸ್ವಯಂಸೇವಾ ಸಂಸ್ಥೆಗೆ 2025ರ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಶೋಷಣೆಯಿಂದ ಅವರನ್ನು ಮುಕ್ತಗೊಳಿಸುವ ಕಾರ್ಯಕ್ಕಾಗಿ ಈ ಗೌರವ ದೊರೆತಿದೆ.* ‘ದಿ ಫೌಂಡೇಶನ್ ಟು ಎಜುಕೇಟ್ ಗರ್ಲ್ಸ್ ಗ್ಲೋಬಲಿ’ ಎನ್ನುವುದು ಸಂಸ್ಥೆಯ ಮೂಲ ಹೆಸರು. ಸಫೀನಾ ಹುಸೇನ್ ಅವರು ಇದನ್ನು 2007ರಲ್ಲಿ ಸ್ಥಾಪಿಸಿದ್ದರು. ಭಾರತದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇದೇ ಮೊದಲು.* ಮನಿಲಾದಲ್ಲಿ ನವೆಂಬರ್ 7ರಂದು 67ನೇ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪರಿಸರ ಸಂರಕ್ಷಣೆ ಕಾರ್ಯಕ್ಕಾಗಿ ಮಾಲ್ದೀವ್ಸ್ನ ಶಾಹಿನಾ ಅಲಿ ಮತ್ತು ಫಿಲಿಪ್ಪೀನ್ಸ್ನ ಫ್ಲಾವಿಯಾನೊ ವಿಲ್ಲಾನುಯೆವಾ ಅವರಿಗೆ ಸಹ ಪ್ರಶಸ್ತಿ ಲಭಿಸಿದೆ.* ಸಂಸ್ಥಾಪಕಿ ಸಫೀನಾ ಹುಸೇನ್ ಅವರ ಪ್ರಕಾರ, ಇದು ದೇಶದ ಪಾಲಿಗೆ ಐತಿಹಾಸಿಕ ಕ್ಷಣ. ಜನರ ಸಹಭಾಗಿತ್ವದಿಂದ ಆರಂಭವಾದ ಚಳವಳಿ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.* ಲಕ್ಷಾಂತರ ಬಾಲಕಿಯರು ತಮ್ಮ ಶಿಕ್ಷಣದ ಹಕ್ಕನ್ನು ಮರಳಿ ಪಡೆದಿರುವುದನ್ನು ಈ ಪ್ರಶಸ್ತಿ ದೃಢೀಕರಿಸುತ್ತದೆ.