* ಭಾರತದ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರು ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ ಪುರುಷರ 50 ಮೀ. ರೈಫಲ್ 3 ಪೊಸಿಸನ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ತೋರಿಸಿ ಚಿನ್ನದ ಪದಕ ಜಯಿಸಿದ್ದಾರೆ.* ಅವರು 462.5 ಅಂಕ ಗಳಿಸಿ ಸ್ಪರ್ಧೆಯ ಬಹುತೇಕ ಹಂತಗಳಲ್ಲಿ ಮುನ್ನಡೆ ಸಾಧಿಸಿದರು. ಚೀನಾದ ವೆನಿಯು ಜಾವೊ ಬೆಳ್ಳಿಯನ್ನು ಮತ್ತು ಜಪಾನಿನ ನವೆೊಯಾ ಒಕಾಡ ಕಂಚನ್ನು ಜಯಿಸಿದರು.* ಜೂನಿಯರ್ ವಿಭಾಗದಲ್ಲಿ ಭಾರತದ ಆ್ಯಡ್ರಿಯನ್ ಕರ್ಮಾಕರ್ ಅವರು 463.8 ಅಂಕಗಳೊಂದಿಗೆ ಏಷ್ಯನ್ ಜೂನಿಯರ್ ದಾಖಲೆಯನ್ನು ನಿರ್ಮಿಸಿ ಚಿನ್ನ ಗೆದ್ದರು.* ಈ ಸ್ಪರ್ಧೆಯಲ್ಲಿ ಭಾರತದ ಚೈನ್ ಸಿಂಗ್ ನಾಲ್ಕನೇ ಮತ್ತು ಅಖೀಲ್ ಶೆರಾನ್ ಐದನೇ ಸ್ಥಾನ ಗಳಿಸಿದರು. ಇದಕ್ಕೂ ಮೊದಲು ಐಶ್ವರಿ, ಚೈನ್ ಸಿಂಗ್ ಮತ್ತು ಅಖೀಲ್ ಶೆರಾನ್ ಅವರು ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.