* ಭಾರತದ ಕುಸ್ತಿಪಟು ಮನೀಶಾ ಭನ್ವಾಲಾ ಅವರು ಶುಕ್ರವಾರ(ಮಾರ್ಚ್ 28) ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು.ಯುವ ಕುಸ್ತಿಪಟು ಅಂತಿಮ್ ಪಂಘಲ್ ಕಂಚಿನ ಪದಕ ಕೈಸೇರಿಸಿಕೊಂಡರು.* ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ, ಇದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಆರು ಕಂಚಿನ ಪದಕಗಳು ಸೇರಿವೆ.* ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಕುಸ್ತಿಪಟುಗಳು ನಿರಾಸೆ ಅನುಭವಿಸಿದರು. ಸುಜಿತ್ ಕಲ್ಕಲ್ 65 ಕೆ.ಜಿ ವಿಭಾಗದಲ್ಲಿ ಪ್ರಾರಂಭಿಕ ಸುತ್ತಿನಲ್ಲಿ ಪ್ಯಾಲೆಸ್ಟೈನ್ನ ಅಬ್ದುಲ್ಲಾ ಅಸ್ಸಾಫ್ ಅವರನ್ನು ತಾಂತ್ರಿಕ ಶ್ರೇಷ್ಠತೆಯಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಆದರೆ, ಜಪಾನಿನ ಕೈಸೆಯ್ ತನಬೆ ವಿರುದ್ಧ ಹಿನ್ನಡೆಯಾದರು.* ವಿಶಾಲ್ ಕಲಿರಾಮನ್, ಚಿರಾಗ್ ಮತ್ತು ಚಂದ್ರಮೋಹನ್ ಮೊದಲ ಸುತ್ತಿನಲ್ಲೇ ಸೋತರು.* ಭಾರತ ಇದುವರೆಗೆ ಗ್ರೀಕೊ-ರೋಮನ್ನಲ್ಲಿ 2 ಕಂಚು, ಮಹಿಳೆಯರ ವಿಭಾಗದಲ್ಲಿ 1 ಚಿನ್ನ, 1 ಬೆಳ್ಳಿ ಸೇರಿದಂತೆ 6 ಪದಕಗಳನ್ನು ಗಳಿಸಿದೆ.