* ಶ್ರೀಲಂಕಾದ ಶಮ್ಮಿ ಸಿಲ್ವಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾದರು. ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಭಾರತದ ಜಯ್ ಶಾ ಅವರ ನಂತರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. * ಮೂರು ಬಾರಿ ಎಸಿಸಿ ಅಧ್ಯಕ್ಷರಾಗಿದ್ದ ಜಯ್ ಶಾ ಅವರ ಅವಧಿ ಮುಗಿದಿದ್ದು, ಶಮ್ಮಿ ಸಿಲ್ವಾ ಅವರು ಈ ಹಿಂದೆ ಸಂಸ್ಥೆಯ ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.* “ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ಮುನ್ನಡೆಸುವುದು ದೊಡ್ಡ ಗೌರವ. ಕ್ರಿಕೆಟ್ ಏಷ್ಯಾದ ಹೃದಯ ಬಡಿತವಾಗಿದೆ, ಮತ್ತು ಆಟವನ್ನು ಉನ್ನತೀಕರಿಸಲು, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲು ಮತ್ತು ಈ ಸುಂದರ ಕ್ರೀಡೆಯ ಮೂಲಕ ನಮ್ಮನ್ನು ಒಂದುಗೂಡಿಸುವ ಬಾಂಧವ್ಯವನ್ನು ಬಲಪಡಿಸಲು ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸಿಲ್ವಾ ಅವರು ತಿಳಿಸಿದ್ದಾರೆ.