* ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಶ್ರೀಲಂಕಾದ ಶಮ್ಮಿ ಸಿಲ್ವಾ ಅವರ ಉತ್ತರಾಧಿಕಾರಿಯಾಗಿದ್ದಾರೆ. * ಜಯ್ ಶಾ ಅವರ ನಿರ್ಗಮನದ ನಂತರ ಶ್ರೀಲಂಕಾ ಕ್ರಿಕೆಟ್ನ ಮುಖ್ಯಸ್ಥ ಶಮ್ಮಿ ಸಿಲ್ವಾ ಅವರು ಆ ಹುದ್ದೆಯನ್ನು ವಹಿಸಿಕೊಂಡಿದ್ದರು. ಅವರ ಸ್ಥಾನಕ್ಕೆ ನಖ್ವಿ ಅವರು ನೇಮಕಗೊಂಡಿದ್ದಾರೆ.* ಮೊಹ್ಸಿನ್ ನಖ್ವಿ ಅವರು ಏಪ್ರಿಲ್ 3, 2025 ರಿಂದ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರುತ್ತಾರೆ.* ಏಪ್ರಿಲ್ 3, ಗುರುವಾರ ಭೂಖಂಡದ ಸಂಸ್ಥೆಯ ಸದಸ್ಯರ ಆನ್ಲೈನ್ ಸಭೆಯ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಯಿತು.