* 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಸ್ವರ್ಣ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. * ಸೆಪ್ಟೆಂಬರ್ 25 ಸೋಮವಾರ ರಂದು ಶೂಟಿಂಗ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಹಾಗೂ ಹರ್ಮಾನ್‌ಪ್ರೀತ್ ಕೌರ್ ನಾಯಕತ್ವದ ಮಹಿಳಾ ಕ್ರಿಕೆಟ್‌ನಲ್ಲಿ  ಮೊದಲ ಚಿನ್ನದ ಪದಕ ಪಡೆದುಕೊಂಡರು.* ಶೂಟಿಂಗ್‌ನಲ್ಲಿ ಮತ್ತೆರಡು ಕಂಚು ಹಾಗೂ ರೋಯಿಂಗ್ ನಲ್ಲೂ ಎರಡು ಕಂಚುಗಳನ್ನು ಪಡೆದುಕೊಂಡಿತು. * ಒಟ್ಟಾರೆಯಾಗಿ ಭಾರತವು ಕ್ರೀಡಾಕೂಟದಲ್ಲಿ ಇದುವರೆಗೆ ಗೆದ್ದ ಒಟ್ಟು ಪದಕಗಳ ಸಂಖ್ಯೆ 11ಕ್ಕೆ (2 ಚಿನ್ನ, 3 ಬೆಳ್ಳಿ, 6 ಕಂಚು) ಏರಿಕೆಯಾಗಿದೆ. * ಶೂಟಿಂಗ್‌ನಲ್ಲಿ ದಿವ್ಯಾಂಶ್ ಸಿಂಗ್‌ ಪನ್ದರ್‌, ರುದ್ರಾಂಕ್‌ ಪಾಟೀಲ್‌, ಐಶ್ವರಿ ಪ್ರತಾಪ್‌ ಸಿಂಗ್‌ ಥೋಮರ್ ಪುರುಷರ 10 ಮೀ. ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತಕ್ಕೆ ಕ್ರೀಡಾಕೂಟದ ಮೊದಲ ಸ್ವರ್ಣ ಪದಕ ಗೆದ್ದುಕೊಟ್ಟರು.