* ಶಾಂಘೈ ಓಪನ್(Shanghai Masters) ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್‌(Matthew Ebden) ಜೋಡಿ ತೃಪ್ತಿಪಟ್ಟಿದ್ದಾರೆ.* ನಾಲ್ಕನೇ ಶ್ರೇಯಾಂಕ ಹೊಂದಿದ್ದ ಬೋಪಣ್ಣ– ಎಬ್ಡೆನ್‌ ಜೋಡಿ ಫೈನಲ್ನಲ್ಲಿ 5–7, 6–2, 10–7 ಅಂತರದಿಂದ ಸ್ಪೇನ್‌ನ ಮಾರ್ಸೆಲ್‌ ಗ್ರಾನೊಲೆರ್ಸ್‌ ಮತ್ತು ಅರ್ಜೆಂಟೀನಾದ ಹೊರಾಸಿಯೊ ಝೆಬೆಲೊಸ್‌ ವಿರುದ್ಧ ಸೋಲು ಕಂಡರು. * ಮೊದಲ ಸೆಟ್‌ ಗೆದ್ದು ಉತ್ತಮ ಆರಂಭ ಪಡೆದಿದ್ದ ಇಂಡೋ-ಆಸೀಸ್ ಜೋಡಿ ಆ ಬಳಿಕದ ಸೆಟ್ನಲ್ಲಿ ಇದೇ ಲಯವನ್ನು ಮುಂದುವರಿಸುವಲ್ಲಿ ಎಡವಿತು. ಏಳನೇ ಶ್ರೇಯಾಂಕದ ಗ್ರಾನೊಲೆರ್ಸ್‌ ಮತ್ತು ಝೆಬೆಲೊಸ್‌ ಅವರು ಆಕ್ರಮಣಕಾರಿ ಆಟವಾಡಿ ಪಂದ್ಯವನ್ನು ಗೆದ್ದರು. ಈ ಪಂದ್ಯ ಒಂದು ಗಂಟೆ 23 ನಿಮಿಷಗಳ ಕಾಲ ನಡೆಯಿತು.