* ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸೂಪರ್‌ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.* ಈ ಕ್ರೀಡಕೂಟದಲ್ಲಿ ದಿವ್ಯಾ ಕಕ್ರನ್ (72 ಕೆಜಿ) ಚಿನ್ನ ಹಾಗೂ ಸಾಕ್ಷಿ ಮಲಿಕ್ (65 ಕೆಜಿ) ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ಪಾತ್ರವಾಗಿದ್ದಾರೆ. ಅನ್ಶು ಮಲಿಕ್ (57 ಕೆಜಿ) ಭಾರತಕ್ಕೆ ಇನ್ನೊಂದು ಚಿನ್ನದ ಪದಕ ತಂದು ಕೊಟ್ಟಿದ್ದಾರೆ.* ಅಕ್ಟೋಬರ್ 5 ರಂದು ಸರಿತಾ ಮೊರ್ (59 ಕೆಜಿ) ಚಿನ್ನದ ಪದಕ ಗಳಿಸಿದ್ದರೆ ಸೀಮಾ ಬಿಸ್ಲಾ (50 ಕೆಜಿ) ಮತ್ತು ಪೂಜಾ (76 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.* ಈ ಆವೃತ್ತಿಯಲ್ಲಿ ಭಾರತ ನಾಲ್ಕು ಚಿನ್ನ ಒಂದು  ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ.  ಮತ್ತು ಇದೆಲ್ಲವನ್ನೂ ಮಹಿಳೆಯರ ವಿಭಾಗದ  ಸ್ಪರ್ಧೆಯಿಂದಲೇ ಪಡೆದದ್ದಾಗಿದೆ ಎನ್ನುವುದು ಗಮನಾರ್ಹ.