Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಏಷ್ಯನ್ ಬಾಕ್ಸಿಂಗ್ ಕೌನ್ಸಿಲ್ ಸದಸ್ಯರಾಗಿ ಭಾರತದ ಬಾಕ್ಸಿಂಗ್ ದಿಗ್ಗಜ ವಿಜೇಂದರ್ ಸಿಂಗ್ ನೇಮಕ
Authored by:
Yallamma G
Date:
20 ಜನವರಿ 2026
➤
ಭಾರತದ ಖ್ಯಾತ ಬಾಕ್ಸರ್ ಮತ್ತು ಒಲಿಂಪಿಕ್ ಪದಕ ವಿಜೇತ
ವಿಜೇಂದರ್ ಸಿಂಗ್
ಅವರನ್ನು
ಏಷ್ಯನ್ ಬಾಕ್ಸಿಂಗ್ ಕೌನ್ಸಿಲ್ (Asian Boxing Council)
ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ (BFI) ಶನಿವಾರ (17-01-2026) ಘೋಷಿಸಿದೆ. ಏಷ್ಯನ್ ಬಾಕ್ಸಿಂಗ್ ಕೌನ್ಸಿಲ್ ವಿಶ್ವ ಬಾಕ್ಸಿಂಗ್ ಕೌನ್ಸಿಲ್ (WBC) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
➤
40 ವರ್ಷದ ವಿಜೇಂದರ್ ಸಿಂಗ್ ಅವರು
2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ
ಗೆಲ್ಲುವ ಮೂಲಕ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ ತಂದುಕೊಟ್ಟ ಹಿರಿಮೆ ಹೊಂದಿದ್ದಾರೆ.
ಅಮೆಚೂರ್
ಮತ್ತು
ವೃತ್ತಿಪರ ಬಾಕ್ಸಿಂಗ್
ಎರಡರಲ್ಲೂ ಎರಡು ದಶಕಗಳಿಗೂ ಹೆಚ್ಚು ಕಾಲದ ಅಪಾರ ಅನುಭವವನ್ನು ಅವರು ಹೊಂದಿದ್ದಾರೆ.
➤ "ಬೀಜಿಂಗ್ನಲ್ಲಿ ಇತಿಹಾಸ ನಿರ್ಮಿಸಿದಂತೆ, ಏಷ್ಯನ್ ಬಾಕ್ಸಿಂಗ್ನ ಬೆಳವಣಿಗೆಗೆ ಶ್ರಮಿಸಲು ನಾನು ಬದ್ಧನಾಗಿದ್ದೇನೆ. ವಿಶೇಷವಾಗಿ ಭಾರತೀಯ ಬಾಕ್ಸರ್ಗಳ ಮೇಲೆ ಗಮನ ಹರಿಸಿ, ಅವರು ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಸಹಾಯ ಮಾಡುತ್ತೇನೆ" ಎಂದು
ವಿಜೇಂದರ್ ಸಿಂಗ್
ಹೇಳಿದ್ದಾರೆ.
➤
ಇತರ ಸಾಧನೆಗಳು:
=>
2010ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಮತ್ತು 2006ರಲ್ಲಿ ಕಂಚಿನ ಪದಕ.
=> ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಬಾರಿ ಪದಕ ವಿಜೇತ
-2006 ರಲ್ಲಿ ಬೆಳ್ಳಿ,
-2014ರಲ್ಲಿ ಬೆಳ್ಳಿ,
-2010ರಲ್ಲಿ ಕಂಚು.
=>
ವೃತ್ತಿಪರ ಬಾಕ್ಸಿಂಗ್:
2015ರಲ್ಲಿ ವೃತ್ತಿಪರ ಬಾಕ್ಸಿಂಗ್ಗೆ ಪಾದಾರ್ಪಣೆ ಮಾಡಿದ ಇವರು, ಇದುವರೆಗೆ ಆಡಿದ 14 ಪಂದ್ಯಗಳಲ್ಲಿ 13ರಲ್ಲಿ ಜಯಗಳಿಸಿದ್ದಾರೆ (9 ನಾಕೌಟ್ ಜಯಗಳು).
➤ ಏಷ್ಯನ್ ಬಾಕ್ಸಿಂಗ್ ಕೌನ್ಸಿಲ್ (ABC) :
ಏಷ್ಯನ್ ಬಾಕ್ಸಿಂಗ್ ಕೌನ್ಸಿಲ್ ಏಷ್ಯಾ ಖಂಡದಲ್ಲಿ ವೃತ್ತಿಪರ ಬಾಕ್ಸಿಂಗ್ ಅನ್ನು ನಿಯಂತ್ರಿಸುವ ಮತ್ತು ಉತ್ತೇಜಿಸುವ ಅತ್ಯುನ್ನತ ಸಂಸ್ಥೆಯಾಗಿದೆ. ಇದು ವಿಶ್ವದ ಅತ್ಯಂತ ಪ್ರಭಾವಶಾಲಿ ಬಾಕ್ಸಿಂಗ್ ಸಂಸ್ಥೆಯಾದ
ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್ (World Boxing Council - WBC)
ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರಧಾನ ಕಛೇರಿ ಥೈಲ್ಯಾಂಡ್ನ
ಬ್ಯಾಂಕಾಕ್ನಲ್ಲಿದೆ
. ಏಷ್ಯಾ ಮಾತ್ರವಲ್ಲದೆ, ಇದು ಆಸ್ಟ್ರಲೇಶಿಯಾ ಮತ್ತು ಓಷಿಯಾನಿಯಾ ಪ್ರದೇಶಗಳ ಬಾಕ್ಸಿಂಗ್ ಚಟುವಟಿಕೆಗಳನ್ನು ಸಹ ನೋಡಿಕೊಳ್ಳುತ್ತದೆ.
Take Quiz
Loading...