* ಗುಲ್ವೀರ್ ಸಿಂಗ್ ಅವರು ಪುರುಷರ 10,000 ಮೀ. ಓಟದಲ್ಲಿ 28 ನಿಮಿಷ 38.63 ಸೆಕೆಂಡುಗಳಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕ ಜಯಿಸಿದರು. ಇದು ಅವರ ಮೊದಲ ಏಷ್ಯನ್ ಚಾಂಪಿಯನ್ಷಿಪ್ ಚಿನ್ನವಾಗಿದೆ.* ಜಪಾನ್ನ ಮೆಬುಕಿ ಸುಝುಕಿ ಬೆಳ್ಳಿ ಮತ್ತು ಬಹರೇನ್ನ ಆಲ್ಬರ್ಟ್ ಕಿಬಿಚಿ ರೊಪ್ ಕಂಚು ಜಯಿಸಿದರು.* ಗುಲ್ವೀರ್ ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಕಂಚು ಗೆದ್ದ ಈ 26 ವರ್ಷದ ಆಟಗಾರ, ಈ ಋತುವಿನ ಏಷ್ಯಾದ ಉತ್ತಮ ಸಮಯದೊಂದಿಗೆ ಸ್ಪರ್ಧೆಯಲ್ಲಿ ಲೆಕ್ಕಾಚಾರದ ಓಟ ಪ್ರದರ್ಶಿಸಿದರು. ಕೊನೆಯ ಹಂತದಲ್ಲಿ ಸ್ಪ್ರಿಂಟರ್ ಶೈಲಿಯಲ್ಲಿ ಮುನ್ನಡೆ ಸಾಧಿಸಿದರು.* ಗುಲ್ವೀರ್ 10,000 ಮೀ. ಓಟದಲ್ಲಿ ಚಿನ್ನ ಜಯಿಸಿದ ಭಾರತದ ಮೂರನೇ ಆಟಗಾರರಾಗಿದ್ದಾರೆ. ಹಿಂದಿನ ವಿಜಯಿಗಳು: ಹರಿ ಚಾಂದ್ (1975), ಜಿ. ಲಕ್ಷ್ಮಣನ್.* ಸರ್ವಿನ್ ಸೆಬಾಸ್ಟಿಯನ್ 1 ಗಂಟೆ 21 ನಿಮಿಷ 13.60 ಸೆಕೆಂಡುಗಳಲ್ಲಿ ಮುಗಿಸಿ ಭಾರತಕ್ಕೆ ಕೂಟದ ಮೊದಲ ದಿನವೇ ಕಂಚು ಗೆದ್ದುಕೊಟ್ಟರು. ತನ್ನ ವೈಯಕ್ತಿಕ ಶ್ರೇಷ್ಠ ಸಾಧನೆ ಮೀರುವಲ್ಲಿ ತೀವ್ರವಾಗಿ ಹೋದರೂ ಯಶಸ್ವಿಯಾಗಲಿಲ್ಲ.* ಅಮಿತ್ ಐದನೇ ಸ್ಥಾನ ಪಡೆದರೆ, ಮಹಿಳೆಯರ ಜಾವೆಲಿನ್ನಲ್ಲಿ ಅನ್ನುರಾಣಿ ನಿರಾಸೆ ಮೂಡಿಸಿದರು ಅವರು 58.30 ಮೀ. ಎಸೆತದಿಂದ ನಾಲ್ಕನೇ ಸ್ಥಾನ ಪಡೆದರು. ಪುರುಷರ ಹೈಜಂಪ್ನಲ್ಲಿ ಸರ್ವೇಶ್ ಕುಶಾರೆ ಅಂತಿಮ ಸುತ್ತಿಗೆ ಅರ್ಹತೆ ಪಡೆದರು.* ಭಾರತದ 58 ಸದಸ್ಯರ ತಂಡ ಈ ಕೂಟದಲ್ಲಿ ಸ್ಪರ್ಧೆಗಿಳಿದಿದೆ. ಹಿಂದಿನ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಭಾರತ 27 ಪದಕಗಳನ್ನು ಗೆದ್ದಿತ್ತು.