* ಭಾರತದ ಅಥ್ಲೀಟ್ಗಳು ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆದ 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 24 ಪದಕಗಳನ್ನು ಗಳಿಸಿ ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿದರು.* ಭಾರತವು 8 ಚಿನ್ನ, 10 ಬೆಳ್ಳಿ ಹಾಗೂ 6 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಹೀಗಾಗಿ ಹಿಂದಿನ ಸಾರಿ (27 ಪದಕಗಳು) ಗಿಂತ ಈ ಬಾರಿ ಒಟ್ಟು ಪದಕಗಳ ಸಂಖ್ಯೆ ಕಡಿಮೆ ಇದ್ದರೂ, ಚಿನ್ನದ ಪದಕಗಳ ಸಂಖ್ಯೆ ಹೆಚ್ಚಾಗಿದೆ.* ಪಾರುಲ್ ಚೌಧರಿ ಅವರು ಮಹಿಳೆಯರ 5000 ಮೀ ಓಟದಲ್ಲಿ ಬೆಳ್ಳಿ ಜಯಿಸಿ ತಮ್ಮ ಎರಡನೇ ಪದಕವನ್ನು ಸಾಧಿಸಿದರು. ಅವರು ಇದಕ್ಕೂ ಮೊದಲು 3000 ಮೀಟರ್ಸ್ ಸ್ಟೀಪಲ್ಚೇಸ್ನಲ್ಲಿ ಕೂಡ ಬೆಳ್ಳಿ ಗೆದ್ದಿದ್ದರು.* ಜಾವೆಲಿನ್ ಥ್ರೋನಲ್ಲಿ ಸಚಿನ್ ಯಾದವ್ 85.16 ಮೀ ಎಸೆದು ಬೆಳ್ಳಿ ಗೆದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದರು. ಇದೇ ವಿಭಾಗದಲ್ಲಿ ಯಶ್ವೀರ್ ಸಿಂಗ್ ಐದನೇ ಸ್ಥಾನ ಪಡೆದರು.* ಪುರುಷರ 200 ಮೀ ಓಟದಲ್ಲಿ ಅನಿಮೇಶ್ ಕುಜುರ್ 20.32 ಸೆಕೆಂಡುಗಳಲ್ಲಿ ಓಡಿ ಕಂಚಿನ ಪದಕ ಪಡೆದರು ಮತ್ತು ರಾಷ್ಟ್ರೀಯ ದಾಖಲೆ ಮಾಡಿದರು. 2015 ನಂತರ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕವಿದು.* ಮಹಿಳೆಯರ 4X100 ಮೀ ರಿಲೆ ತಂಡವೂ 43.86 ಸೆಕೆಂಡುಗಳಲ್ಲಿ ಓಡಿ ಬೆಳ್ಳಿ ಜಯಿಸಿತು. ಪೂಜಾ ಅವರು 800 ಮೀ ಓಟದಲ್ಲಿ ಮತ್ತು ವಿದ್ಯಾ ರಾಮರಾಜ್ 400 ಮೀ ಹರ್ಡಲ್ಸ್ನಲ್ಲಿ ಕಂಚು ಪಡೆದರು.* ಜ್ಯೋತಿ ಯರ್ರಾಜಿ ಅವರು 200 ಮೀ ಫೈನಲ್ನಲ್ಲಿ ಐದನೇ ಸ್ಥಾನ ಪಡೆದರೂ, ಅವರು ಈ ಕೂಟದಲ್ಲಿ 100 ಮೀ ಹರ್ಡಲ್ಸ್ನಲ್ಲಿ ಚಿನ್ನ ಗೆದ್ದಿದ್ದರು. ಭಾರತೀಯ ಅಥ್ಲೀಟ್ಗಳ ಪ್ರದರ್ಶನ ಶ್ಲಾಘನೀಯವಾಗಿದ್ದು, ಹಲವು ಹೊಸ ಸಾಧನೆಗಳನ್ನು ದಾಖಲಿಸಿದ್ದಾರೆ.