* ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದೆ.* ಗುಜರಾತ್ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿ ಶೇ.32ರಷ್ಟು ಏರಿಕೆ ಕಂಡಿದ್ದು, 2020 ರಲ್ಲಿ 674 ರಿಂದ 2025ರಲ್ಲಿ 891 ಸಿಂಹಗಳು ವಾಸಿಸುತ್ತಿವೆ ಎಂದು ಗುಜರಾತ್ ಸರಕಾರ ಮಾಹಿತಿ ನೀಡಿದೆ.* ಇತ್ತೀಚೆಗೆ ಗುಜರಾತ್ ಅರಣ್ಯ ಇಲಾಖೆಯು 16ನೇ ಏಷ್ಯಾಟಿಕ್ ಸಿಂಹ ಜನಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು, 2020ರಿಂದ ಸಿಂಹಗಳ ಸಂಖ್ಯೆಯಲ್ಲಿ ಶೇ.32ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.* ಏಷ್ಯಾಟಿಕ್ ಸಿಂಹ (ಪ್ಯಾಂಥೆರಾ ಲಿಯೋ ಪರ್ಸಿಕಾ) ಭಾರತದಲ್ಲಿ ಹೆಚ್ಚಾಗಿ ಗುಜರಾತ್ನ ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ.* ಸಿಂಹಗಳ ರಕ್ಷಣೆಗೆ ಕೇಂದ್ರ ಸರಕಾರ 2020ರಲ್ಲಿಯೇ 'ಪ್ರಾಜೆಕ್ಟ್ ಲಯನ್' 1 ಯೋಜನೆಯನ್ನು ಜಾರಿಗೊಳಿಸಿದೆ.* 2015 ರಿಂದ 2025 ರವರೆಗೆ ದಶಕದ ಬೆಳವಣಿಗೆಯಲ್ಲಿ ಶೇ. 70.36 ರಷ್ಟು ಸಂಖ್ಯಾ ಏರಿಕೆಯಾಗಿದೆ.* 1990 ರ 6,600 ಚ.ಕಿ.ಮೀ. ಇಂದ 2025 ರಲ್ಲಿ 35,000 ಚ.ಕಿ.ಮೀ. (ಶೇ. 430%)ರಷ್ಟು ವ್ಯಾಪ್ತಿ ವೃದ್ಧಿಯಾಗಿದೆ.* ಸಿಂಹ ಸಂರಕ್ಷಣಾ ಪ್ರಯತ್ನಗಳು ಯಶಸ್ವಿಯಾಗಿದ್ದು, ಜನಸಂಖ್ಯೆ ಹಾಗೂ ವಿತರಣೆಯಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ.