* ಏಷ್ಯಾದಲ್ಲೇ‌ ಅತಿ ಹೆಚ್ಚು ಗಾಳಿ‌ ಬೀಸುವ ಎರಡನೇ ಪ್ರದೇಶ ಚಿತ್ರದುರ್ಗದ 'ಜೋಗಿಮಟ್ಟಿ' ಗಿರಿಧಾಮವಾಗಿದೆ. ಮಿನಿ ಊಟಿಯ ಖ್ಯಾತಿ ಈ ಜೋಗಿಮಟ್ಟಿಗೆ ಇದೆ.* ಕೇರಳದ ಇಡುಕ್ಕಿ ಜಿಲ್ಲೆಯ ರಾಮಕ್ಕಲ್ಮೇಡು ಏಷ್ಯಾದ ಅತ್ಯಂತ ಗಾಳಿ ಬೀಸುವ ಮೊದಲನೇ ಸ್ಥಳವಾಗಿದೆ.* ಚಿತ್ರದುರ್ಗದ 'ಜೋಗಿಮಟ್ಟಿ ಎತ್ತರದ ಗಿರಿಧಾಮ, ಹಚ್ಚ ಹಸಿರಿನ ಸೊಬಗಿನಿಂದ ಮಲೆನಾಡನ್ನೇ ನಾಚಿಸುವಂತೆ ಆಕರ್ಷಿಸುತಿದ್ದ ಪ್ರವಾಸಿಧಾಮ.‌ ಆದ್ರೆ‌ ಬೇಸಿಗೆ ಆರಂಭವಾದ ಬೆನ್ನಲ್ಲೇ  ಆ ಪ್ರವಾಸಿ ತಾಣದ  ಎಂಟ್ರಿಗೆ ಅರಣ್ಯಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಪ್ರವಾಸಿತಾಣ ಬಿಕೋ ಎನ್ನುತ್ತಿದೆ.* ಒಟ್ಟಾರೆ ಬೇಸಿಗೆ ಆರಂಭದಲ್ಲೇ ಜೋಗಿಮಟ್ಟಿ  ಒಣಗಿದ ಮರುಭೂಮಿ ಯಾಗಿದೆ. ಹೀಗಾಗಿ‌ ಬೆಂಕಿ ಅವಘಡದಿಂದ ಗಿರಿಧಾಮವನ್ನು‌ ಸಂರಕ್ಷಿಸಲು  ಪ್ರವಾಸಿಗರ ಪ್ರವೇಶಕ್ಕೆ ನಿಷೇಧಾಜ್ಞೆ ಜಾರಿಯಾಗಿದೆ. ಹೀಗಾಗಿ ಪ್ರವಾಸಿ ತಾಣ ಬಿಕೊ‌ಎನ್ನುತ್ತಿದ್ದು,ಬೇಸಿಗೆ ಕಳೆದ ಬಳಿಕ ಪ್ರವಾಸಿಗರು ಇಲ್ಲಿನ ನೈಸರ್ಗಿಕ ಸೊಬಗನ್ನು ಸವಿಯಲು ಮುಕ್ತವಾಗಲಿದೆ.