* ಸುರೇಖಾ ಯಾದವ್ – ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ – 36 ವರ್ಷದ ಸೇವೆಯನ್ನು ಮುಗಿಸಿ ಇದೇ ಸೆಪ್ಟೆಂಬರ್ 30ರಂದು ನಿವೃತ್ತಿಯಾಗುತ್ತಿದ್ದಾರೆ. ಮಹಿಳೆಯರ ಕೈಗೆ ಸಾದ್ಯವಲ್ಲ ಎನ್ನಲಾದ ಕಾಲದಲ್ಲಿಯೇ ಅವರು ರೈಲು ಎಂಜಿನಿಯರ್ ಆಗಿ ಕೆಲಸ ಆರಂಭಿಸಿದರು.* 1988ರಲ್ಲಿ ಗೂಡ್ಸ್ ರೈಲಿನಿಂದ ವೃತ್ತಿ ಆರಂಭಿಸಿದ ಸುರೇಖಾ, ಮುಂಬೈ ಲೋಕಲ್, ಡೆಕ್ಕನ್ ಕ್ವೀನ್, ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಅನೇಕ ಪ್ರಮುಖ ರೈಲುಗಳನ್ನು ಚಲಾಯಿಸಿದ್ದಾರೆ. ಇಷ್ಟೊಂದು ವೈವಿಧ್ಯಮಯ ರೈಲುಗಳನ್ನು ಚಲಾಯಿಸಿದ ಮೊದಲ ಮಹಿಳೆಯೂ ಇವರೇ.
* ಮಹಾರಾಷ್ಟ್ರದ ಸತಾರದಲ್ಲಿ ಹುಟ್ಟಿದ ಸುರೇಖಾ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಅವರ ಪತಿ ಪೊಲೀಸ್ ಅಧಿಕಾರಿಯಾಗಿದ್ದು, ಇಬ್ಬರು ಮಕ್ಕಳು ಎಂಜಿನಿಯರ್ಗಳಾಗಿದ್ದಾರೆ.* ಅವರು 1989ರಲ್ಲಿ ಸಹಾಯಕ ಲೋಕೋ ಚಾಲಕಿ, 1996ರಲ್ಲಿ ಗೂಡ್ಸ್ ರೈಲು ಚಾಲಕಿ, 2000ರಲ್ಲಿ ರೈಲು ಚಾಲಕಿ, 2010ರಲ್ಲಿ ಘಾಟ್ ಡ್ರೈವರ್, 2023ರಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಚಾಲಕರಾಗುವವರೆಗೆ ಅನೇಕ ಹಂತಗಳಲ್ಲಿ ಸಾಧನೆ ಮಾಡಿದ್ದಾರೆ.* ಅಡೆತಡೆಗಳನ್ನು ಮೀರಿದ ಅವರ ಬದುಕು ಅನೇಕ ಮಹಿಳೆಯರಿಗೆ ಸ್ಫೂರ್ತಿ.* ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿ ಸುರೇಖಾ ಯಾದವ್ ಅವರ ಹೆಸರು ಅಜರಾಮರವಾಗಿದೆ.