* ಅನುಭವಿ ಮಿಡ್ಫೀಲ್ಡರ್ ಸಲಿಮಾ ಟೆಟೆ ಅವರನ್ನು ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲೂ ಭಾರತ ಮಹಿಳಾ ತಂಡದ ನಾಯಕಿಯನ್ನಾಗಿ ಮುಂದುವರಿಸಲಾಗಿದೆ. ಸೆಪ್ಟೆಂಬರ್ 5ರಿಂದ 14ರವರೆಗೆ ಚೀನಾದ ಹಾಂಗ್ಝೌನಲ್ಲಿ ಟೂರ್ನಿ ನಡೆಯಲಿದೆ.* ಈ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವ ತಂಡ ಮುಂದಿನ ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.* ಭಾರತ ‘ಬಿ’ ಗುಂಪಿನಲ್ಲಿ ಜಪಾನ್, ಥಾಯ್ಲೆಂಡ್ ಮತ್ತು ಸಿಂಗಪುರ ವಿರುದ್ಧ ಆಡಲಿದೆ. ಮೊದಲ ಪಂದ್ಯ ಸೆ. 5ರಂದು ಥಾಯ್ಲೆಂಡ್ ವಿರುದ್ಧ ನಡೆಯಲಿದೆ.* ಮುಖ್ಯ ಕೋಚ್ ಹರೇಂದ್ರ ಸಿಂಗ್ ಪ್ರಕಾರ, ತಂಡದಲ್ಲಿ ಅನುಭವಿಗಳ ಜೊತೆಗೆ ಯುವ ಆಟಗಾರ್ತಿಯರು ಕೂಡಿದ್ದು ಉತ್ತಮ ಸಮತೋಲನ ಹೊಂದಿದೆ.* 23 ವರ್ಷದ ಸಲಿಮಾ ಅವರನ್ನು ಕಳೆದ ವರ್ಷ ಮೊದಲ ಬಾರಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು.* 20 ಮಂದಿಯ ತಂಡದಲ್ಲಿ ಬನ್ಸಾರಿ ಸೋಲಂಕಿ, ಬಿಚು ದೇವಿ (ಗೋಲ್ಕೀಪರ್ಸ್), ಮನಿಶಾ ಚೌಹಾನ್, ಉದಿತಾ, ಜ್ಯೋತಿ, ನಿಕ್ಕಿ ಪ್ರಧಾನ್ (ಡಿಫೆಂಡರ್ಸ್), ನೇಹಾ, ಲಾಲ್ರೆಮ್ಸಿಯಾಮಿ, ಸುನೆಲಿಟಾ (ಮಿಡ್ಫೀಲ್ಡರ್ಸ್), ನವನೀತ್ ಕೌರ್, ದೀಪಿಕಾ, ಸಂಗೀತಾ ಕುಮಾರಿ ಸೇರಿದಂತೆ ಪ್ರಮುಖ ಆಟಗಾರ್ತಿಯರು ಸೇರಿದ್ದಾರೆ.