* ಏರ್ಟೆಲ್ ಕಂಪನಿ ಗ್ರಾಹಕರಿಗೆ 10 ನಿಮಿಷದಲ್ಲಿ ಸಿಮ್ ಕಾರ್ಡ್ ವಿತರಿಸುವ ಉದ್ದೇಶದಿಂದ ಕ್ವಿಕ್ ಕಾಮರ್ಸ್ ಸಂಸ್ಥೆ ಬ್ಲಿಂಕಿಟ್ ಜೊತೆಗೆ ಸಹಭಾಗಿತ್ವ ಹೊಂದಿದೆ.* ಈ ಸೇವೆಯನ್ನು ಪ್ರಾರಂಭದಲ್ಲಿ ದೇಶದ 16 ಪ್ರಮುಖ ನಗರಗಳಲ್ಲಿ ಆರಂಭಿಸಲಾಗುತ್ತಿದೆ. ಬೆಂಗಳೂರು, ದೆಹಲಿ, ಗುರುಗ್ರಾಮ, ಫರೀದಾಬಾದ್, ಸೂರತ್, ಚೆನ್ನೈ, ಭೋಪಾಲ್, ಇಂದೋರ್, ಮುಂಬೈ, ಪುಣೆ, ಲಖನೌ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿದಂತೆ ಈ ನಗರಗಳಲ್ಲಿ ಬ್ಲಿಂಕಿಟ್ ಮುಖಾಂತರ 10 ನಿಮಿಷಗಳಲ್ಲಿ ಏರ್ಟೆಲ್ ಸಿಮ್ ಪಡೆಯಬಹುದು.* ಕಂಪನಿ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಇತರೆ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.* ಸಿಮ್ ಕಾರ್ಡ್ ಪಡೆಯಲು ಕನಿಷ್ಠ ₹49 ಸೇವಾ ಶುಲ್ಕವನ್ನು ಪಾವತಿಸಬೇಕು. ಸಿಮ್ ಸಿಗುತ್ತಿದ್ದಂತೆ, ಗ್ರಾಹಕರು ಆಧಾರ್ ಆಧಾರಿತ ಕೆವೈಸಿ(KYC) ಮೂಲಕ ದೃಢೀಕರಣ ಮಾಡಿಸಿ, ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.* ಗ್ರಾಹಕರು ಪ್ರೀಪೇಯ್ಡ್ ಅಥವಾ ಪೋಸ್ಟ್ಪೇಯ್ಡ್ ಪ್ಲಾನ್ ಆಯ್ಕೆ ಮಾಡಬಹುದು. ಸಿಮ್ ಸಿಕ್ಕಿದ ದಿನದಿಂದ 15 ದಿನಗಳೊಳಗೆ ಅದು ಆಕ್ಟಿವೇಟ್ ಮಾಡಬೇಕು ಎಂದು ಕಂಪನಿ ಸ್ಪಷ್ಟಪಡಿಸಿದೆ.