* ಭಾರತೀಯ ಡಿಜಿಟಲ್ ಉದ್ಯಮಗಳ ಅಗತ್ಯಗಳಿಗೆ ಸ್ಪಂದನೆ ನೀಡುವ ಉದ್ದೇಶದಿಂದ, ಏರ್ಟೆಲ್ನ ಎಕ್ಸ್ಟೆಲಿಫೈ ಸೋಮವಾರ(ಆಗಸ್ಟ್ 04) "Airtel Cloud" ಎಂಬ ಹೊಸ ಟೆಲ್ಕೋ-ಗ್ರೇಡ್ ಕ್ಲೌಡ್ ಪ್ಲಾಟ್ಫಾರ್ಮ್ನ್ನು ಬಿಡುಗಡೆ ಮಾಡಿದೆ.* ಪ್ರತಿ ನಿಮಿಷಕ್ಕೆ 140 ಕೋಟಿ ವಹಿವಾಟುಗಳನ್ನು ನಿರ್ವಹಿಸಲು ರೂಪುಗೊಂಡ ಈ ಪ್ಲಾಟ್ಫಾರ್ಮ್ನ್ನು ಭಾರತದೆಲ್ಲೆಡೆ ಉದ್ಯಮಗಳಿಗೆ ವಿಸ್ತರಿಸಲಾಗಿದೆ.* ಎರ್ಸ್ಟೆಲ್ನ ಉಪಾಧ್ಯಕ್ಷ ಗೋಪಾಲ್ ವಿಟಲ್ ಅವರ ಪ್ರಕಾರ, ಇದು ಕಂಪನಿಯ ಇತಿಹಾಸದಲ್ಲಿ ಪ್ರಮುಖ ಘಟ್ಟವಾಗಿದ್ದು, ಭಾರತ ಮತ್ತು ಜಾಗತಿಕ ಟೆಲ್ಕೋಗಳಿಗೆ ನೂತನ ತಂತ್ರಜ್ಞಾನವನ್ನು ಮುನ್ನಡೆಸುವ ಹೆಜ್ಜೆಯಾಗಿದೆ. ಈ ಕ್ಲೌಡ್ ಪ್ಲಾಟ್ಫಾರ್ಮ್ನ್ನು 300 ಸರ್ಟಿಫೈಡ್ ತಜ್ಞರು ನಿರ್ವಹಿಸುತ್ತಿದ್ದಾರೆ.* ಈ ಪ್ಲಾಟ್ಫಾರ್ಮ್ IaaS, PaaS, ಸುಲಭ ಮೈಗ್ರೇಶನ್, ವೆಚ್ಚ ಕಡಿತ ಮತ್ತು vendor lock-in ಇಲ್ಲದ ವೈಶಿಷ್ಟ್ಯಗಳನ್ನು ನೀಡುತ್ತದೆ. ಎಲ್ಲಾ ಡೇಟಾ ಕಾರ್ಯಾಚರಣೆಗಳ ನಿಯಂತ್ರಣ ಭಾರತದಲ್ಲಿಯೇ ಇರುತ್ತದೆ – ವಿದೇಶಿ ಪ್ರವೇಶಕ್ಕೆ ಅವಕಾಶವಿಲ್ಲ.* ಎಕ್ಸ್ಟೆಲಿಫೈ, ಸಿಂಜಿಟೆಲ್ (ಸಿಂಗಾಪುರ), ಗ್ಲೋಬ್ ಟೆಲಿಕಾಂ (ಫಿಲಿಪೈನ್ಸ್), ಮತ್ತು ಏರ್ಟೆಲ್ ಆಫ್ರಿಕಾ (ಆಫ್ರಿಕಾ) ಸಹಿತ ಜಾಗತಿಕ ಟೆಲ್ಕೋಗಳೊಂದಿಗೆ ಸಹಭಾಗಿತ್ವ ಒಪ್ಪಂದಗಳಿಗೆ ಸಹಿ ಹಾಕಿದೆ.* ಇದಕ್ಕೂ ಅತಿರಿಕ್ತವಾಗಿ, Xtelify ಕಂಪನಿಯು ವಿಭಿನ್ನ AI ಆಧಾರಿತ ಸಾಫ್ಟ್ವೇರ್ ಪ್ಲಾಟ್ಫಾರ್ಮ್ಗಳನ್ನು ಬಿಡುಗಡೆ ಮಾಡಿದೆ – ಉದಾ: XtelifyWork, Xtelify Serve, Xtelify Data Engine, ಮತ್ತು Xtelify IQ – ಇವು ಫೀಲ್ಡ್ ಟಾಸ್ಕ್ ನಿರ್ವಹಣೆ, ಗ್ರಾಹಕ ಸಂವಹನ, ಮತ್ತು ಡೇಟಾ ಒಳನೋಟಗಳಿಗಾಗಿ ಉಪಯೋಗವಾಗುತ್ತವೆ.* ಈ ಪ್ಲಾಟ್ಫಾರ್ಮ್ಗಳು ಈಗಾಗಲೇ ಬಹು ಮಿಲಿಯನ್ ಡಾಲರ್ ಒಪ್ಪಂದಗಳನ್ನು ಗೆದ್ದಿವೆ ಮತ್ತು ಮತ್ತಷ್ಟು ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ವಿಟಲ್ ತಿಳಿಸಿದ್ದಾರೆ.