* ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಏಪ್ರಿಲ್ 7ರಿಂದ ಆರಂಭವಾಗಿದ್ದು, ಎಂಪಿಸಿ ಸಭೆಯ ನಿರ್ಣಯ ಏಪ್ರಿಲ್ 9ರಂದು ಪ್ರಕಟವಾಗಲಿದೆ.\* ಗವರ್ನರ್ ಸಂಜಯ್ ಮಲ್ಲೋತ್ರಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಲ್ಲರೆ ಹಣದುಬ್ಬರವು ಆರ್ಬಿಐನ ನಿಗದಿತ ಗುರಿಗಿಂತ ಕಡಿಮೆ ದಾಖಲಾಗಿದೆ. *ರೆಪೋ ದರ ಇಳಿಕೆ ನಿರೀಕ್ಷೆ:- ಅಮೆರಿಕದ ಪ್ರತಿ ಸುಂಕ ನೀತಿಯು ಭಾರತ ಸೇರಿ ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಸವಾಲೊಡ್ಡಿದೆ. ಹಾಗಾಗಿ, ದೇಶದ ಒಟ್ಟು ಆಂತರಿಕ ಉತ್ಪನ್ನದ (GDP) ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಬಾರಿಯೂ ರೆಪೊ ದರದಲ್ಲಿ ಶೇ.0.25ರಷ್ಟು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಆರ್ಥಿ ತಜ್ಞರು ಅಂದಾಜಿಸಿದ್ದಾರೆ.* ಸಾಲದಾರರಿಗೆ ಲಾಭ:ಬಡ್ಡಿದರ ಇಳಿಕೆಯಿಂದ ಗೃಹಸಾಲ, ಕಾರು ಸಾಲದ ಇಎಂಐ ಕಡಿಮೆಯಾಗುವ ಸಾಧ್ಯತೆಯಿದೆ. ₹50 ಲಕ್ಷ ಸಾಲದ ಮೇಲೆ ₹700-₹1000 ಏಮಿ ಉಳಿತಾಯ ಸಾಧ್ಯ.* ವಿವಿಧ ಅಭಿಪ್ರಾಯಗಳು:ಬಾರ್ಕ್ಲೇಸ್, ಐಸಿಆರ್ಎ – 0.25% ಇಳಿಕೆ ನಿರೀಕ್ಷೆ.ಅಸೋಚಾಮ್ – ಬಡ್ಡಿದರ ತಕ್ಷಣ ಕಡಿಮೆ ಮಾಡಬಾರದು ಎಂಬ ಅಭಿಪ್ರಾಯ.