* ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಕಡಲ ಉದ್ಯಮದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಲು ಈ ದಿನವನ್ನು ವಾರ್ಷಿಕವಾಗಿ ಏಪ್ರಿಲ್ 5 ರಂದು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯವಾಗಿ ಮತ್ತು ದೇಶೀಯವಾಗಿ ಸರಕುಗಳನ್ನು ಸಾಗಿಸುವಲ್ಲಿ ಹಡಗುಗಳು ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ.* ರಾಷ್ಟ್ರೀಯ ಸಾಗರಯಾನ ದಿನದ 2025 ರ ದ್ಯೇಯ ವಾಕ್ಯ 'ನಮ್ಮ ಸಾಗರ, ನಮ್ಮ ಬಾಧ್ಯತೆ ಹಾಗೂ ನಮ್ಮ ಅವಕಾಶ' ಎಂಬುದು ಥೀಮ್ ಆಗಿದೆ. * ಭಾರತದ ಸಿಂಧಿಯಾ ಸ್ಟಿಮ್ ನೇವಿಗೇಷನ್ ಕಂಪೆನಿಯ ಎಸ್ಎಸ್ ಲಾಯಲ್ಟಿ ಹಡಗು ಪ್ರಥಮ ಬಾರಿಗೆ ಬ್ರಿಟನ್ ಗೆ 1919 ಏಪ್ರಿಲ್ 5 ರಂದು ಪ್ರಯಾಣ ಬೆಳೆಸಿತ್ತು 1919 ರವರೆಗೆ ಭಾರತದ ಯಾವ ಹಡಗು ಬೇರೆ ದೇಶಕ್ಕೆ ಪ್ರಯಾಣ ಮಾಡಿರಲಿಲ್ಲ ಹಾಗಾಗಿ ಏಪ್ರಿಲ್ 5 ಅನ್ನು ರಾಷ್ಟ್ರೀಯ ಸಾಗರಯಾನ ದಿನ ಎಂದು ಆಚರಿಸಲಾಗುತ್ತದೆ.* ಭಾರತದ ಸಮುದ್ರ ವ್ಯಾಪಾರದ ವಿಸ್ತರಣೆಯು 1962 ರಲ್ಲಿ ಹಡಗು ಸಚಿವಾಲಯದ ರಚನೆಗೆ ಕಾರಣವಾಯಿತು. ಎರಡು ವರ್ಷಗಳ ನಂತರ 1964 ರಲ್ಲಿ ಈ ಐತಿಹಾಸಿಕ ಸಮುದ್ರಯಾನವನ್ನು ಗೌರವಿಸಲು ಏಪ್ರಿಲ್ 5 ಅನ್ನು ಅಧಿಕೃತವಾಗಿ ರಾಷ್ಟ್ರೀಯ ಸಮುದ್ರಯಾನ ದಿನವೆಂದು ಘೋಷಿಸಲಾಯಿತು.* ಭಾರತದ ಶೇ. 90 ರಷ್ಟು ವ್ಯಾಪಾರ ವಹಿವಾಟನ್ನು ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದ್ದು, ಭಾರತದಲ್ಲಿ ಒಟ್ಟು 182 ಬಂದರುಗಳಿದ್ದು, 7517 ಕಿಲೋ ಮೀಟರ್ ಕರಾವಳಿ ತೀರವನ್ನು ಹೊಂದಿದೆ. ಯುರೋಪಿಯನ್ನರು ಭಾರತದ ಕರಾವಳಿ ಮೂಲಕ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಶುರು ಮಾಡಿದ ನಂತರ ಭಾರತದಲ್ಲಿ ಸಾಗರಯಾನ ಇನ್ನು ಹೆಚ್ಚಾಯಿತು.* ರಾಷ್ಟ್ರೀಯ ಸಾಗರಯಾನ ದಿನದ ಈ ವರ್ಷ(2024) ಮಾರ್ಚ್ 29 ರಿಂದ ಏಪ್ರಿಲ್ 5 ವರೆಗೆ ರಾಷ್ಟ್ರೀಯ ಸಾಗರಯಾನ ಸಪ್ತಾಹವನ್ನು ಹಮ್ಮಿಕೊಂಡಿದ್ದು, ನಾವಿಕರ ಸೇವೆ, ನಾವಿಕರ ಸೇವೆಯನ್ನು ಗೊರವಿಸುವುದು, ಭಾರತ ಸಾಗರಯಾನ ವನ್ನು ಸ್ಮರಿಸುವ ಉದ್ದೇಶದಿಂದ ಸಾಗರಯಾನ ಸಪ್ತಾಹವನ್ನು ಆಚರಿಸಲಾಗುತ್ತದೆ.* ಭಾರತದಲ್ಲಿ ಒಟ್ಟು 182 ಬಂದರುಗಳಿದ್ದು, 7,517 ಕಿಲೋ ಮೀಟರ್ ಕರಾವಳಿ ತೀರವನ್ನು ಹೊಂದಿದೆ. ಕೋಲ್ಕತ್ತಾ, ಮುಂಬೈ, ಚೆನ್ನೈ, ಕೊಚ್ಚಿ, ಕಾಂಡ್ಲಾ, ವಿಶಾಖ ಪಟ್ಟಣಂ, ಪ್ಯಾರದೀಪ, ತೂತುಕುಡಿ, ನವ ಮಂಗಳೂರು, ಮರ್ಮಗಾಂವ್ ಮತ್ತು ಜವಾಹರಲಾಲ್ ನೆಹರು ಪ್ರಮುಖ ಬಂದರುಗಳಾಗಿವೆ.* ಮ್ಯಾರಿಟೈಮ್ ಇಂಡಿಯಾ ವಿಷನ್ 2030- ಈ ಯೋಜನೆಯಡಿ ನೌಕಾವಲಯದ ಶಿಕ್ಷಣ, ಸಂಶೋಧನೆ ಮತ್ತು ತರಬೇತಿಯನ್ನು ವಿಶ್ವದರ್ಜೆಗೆ ಕೊಂಡೊಯ್ಯಲು ಉದ್ದೇಶಿಸಿದ್ದು, ಅಂತಾರಾಷ್ಟ್ರೀಯ ಸಮಾವೇಶ ನಾವಿಕರ ತರಬೇತಿ ಮತ್ತು ಸರ್ಟಿಫಿಕೇಟ್ ಮತ್ತು ವಾಚ್ ಕೀಪಿಂಗ್ (ಎಸ್ಟಿಸಿಡಬ್ಲ್ಯೂ) ಮತ್ತು ಮ್ಯಾರಿಟೈಮ್ ಲೇಬರ್ ಕನ್ವೆನ್ಸನ್ (ಎಂಎಲ್ಸಿ) ಭಾರತ ಸಹಿ ಹಾಕಿದೆ. ಅಂತಾರಾಷ್ಟ್ರೀಯ ಸಮುದ್ರಯಾನ ಉದ್ಯೋಗಗಳಲ್ಲಿ ಶೇ.12ರಷ್ಟು ಭಾರತೀಯರಿದ್ದಾರೆ. ಈ ಅಂಕಿ-ಅಂಶವು 2030ರ ವೇಳೆಗೆ ಶೇ.20ಕ್ಕೆ ತಲುಪಲು "ಮ್ಯಾರಿಟೈಮ್ ವಿಷನ್-2030' ನೆರವಾಗಲಿದೆ.