* ಇಂಟರ್ನ್ಯಾಷನಲ್ ಥಿಯೇಟರ್ ಇನ್ಸಿಟ್ಯೂಟ್ ನೃತ್ಯ ಸಮಿತಿಯು ಏಪ್ರಿಲ್ 29 ಅನ್ನು ಅಂತಾರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನವು ಆಧುನಿಕ ಬ್ಯಾಲೆ ನೃತ್ಯ ಪ್ರಕಾರದ ಸೃಷ್ಟಿಕರ್ತ ಜೀನ್-ಜಾರ್ಜಸ್ ನೊವೆರ್ ಅವರ ಜನ್ಮದಿನವಾಗಿದ್ದು, ಪ್ರತಿ ವರ್ಷ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.* ನೃತ್ಯದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಮೂಲಕ ಜನರನ್ನು ಒಟ್ಟುಗೂಡಿಸುವುದೇ ದಿನ ಉದ್ದೇಶವಾಗಿದೆ.* ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ (ಐಟಿಐ) 1982 ರಲ್ಲಿ ಅಂತರರಾಷ್ಟ್ರೀಯ ನೃತ್ಯ ದಿನವನ್ನು ಖ್ಯಾತ ಬ್ಯಾಲೆ ನೃತ್ಯಪಟುಗಳಾಗಿದ್ದ ಜೀನ್-ಜಾರ್ಜಸ್ ನೊವೆರ್ರೆ (1727-1810) ಅವರ ಜನ್ಮದಿನವಾದ ಏಪ್ರಿಲ್ 29 ರಂದು ಆರಂಭಿಸಿತು.* ಪ್ರತಿ ವರ್ಷ ಇಂಟರ್ನ್ಯಾಷನಲ್ ಡ್ಯಾನ್ಸ್ ಕಮಿಟಿ ಮತ್ತು ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ ITI ಜಗತ್ತಿನಾದ್ಯಂತ ಎಲ್ಲಾ ನೃತ್ಯಗಾರರಿಗೆ ವಿಶೇಷ ಸಂದೇಶವನ್ನು ರವಾನಿಸಲು ಅತ್ಯುತ್ತಮ ನೃತ್ಯ ಸಂಯೋಜಕ ಅಥವಾ ನರ್ತಕಿಯನ್ನು ಆಯ್ಕೆ ಮಾಡುತ್ತದೆ.* ಮೊದಲ ಅಂತರರಾಷ್ಟ್ರೀಯ ನೃತ್ಯ ದಿನವನ್ನು 1982 ರಲ್ಲಿ ಆಚರಿಸಲಾಯಿತು. ಅಂದಿನಿಂದ ಇದು ಪ್ರಪಂಚದಾದ್ಯಂತ ನೃತ್ಯ ಸಮುದಾಯಗಳು, ಶಾಲೆಗಳು, ಕಂಪನಿಗಳು ಮತ್ತು ಸಂಸ್ಥೆಗಳಿಂದ ಆಯೋಜಿಸಲಾದ ಕಾರ್ಯಕ್ರಮಗಳೊಂದಿಗೆ ಜಾಗತಿಕ ಆಚರಣೆಯಾಗಿ ಬೆಳೆದಿದೆ. * ನೃತ್ಯವು ಕಲೆ ಮತ್ತು ಅಭಿವ್ಯಕ್ತಿಯ ಒಂದು ರೂಪ ಮಾತ್ರವಲ್ಲದೆ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.