* ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನ (WMD)ವನ್ನು ಆಚರಿಸಲಾಗುತ್ತದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ.* 2025 ರ ವಿಶ್ವ ಮಲೇರಿಯಾ ದಿನದ ಥೀಮ್ " ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ: ಮರುಹೂಡಿಕೆ ಮಾಡಿ, ಮರುಕಲ್ಪಿಸಿಕೊಳ್ಳಿ, ಪುನಃ ಪ್ರಜ್ವಲಿಸಿ" ಎಂಬ ವಿಷಯದ ಅಡಿಯಲ್ಲಿ ಈ ವರ್ಷ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ.* ವಿಶ್ವ ಮಲೇರಿಯಾ ದಿನವನ್ನು 2007 ರಲ್ಲಿ ವಿಶ್ವ ಅರೋಗ್ಯ ಅಸೆಂಬ್ಲಿ ಪ್ರಾರಂಭಿಸಿತ್ತು. ಇದಕ್ಕೂ ಮೊದಲು ಆಫ್ರಿಕಾ 2001 ರಿಂದ ಪ್ರತಿ ವರ್ಷ ಏಪ್ರಿಲ್ 25 ರಂದು ಮಲೇರಿಯಾ ದಿನವನ್ನು ಆಚರಿಸುತಿತ್ತು. * ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ ಒ) 2023ರ ವಿಶ್ವ ಮಲೇರಿಯಾ ವರದಿ ಪ್ರಕಾರ 2022ರಲ್ಲಿ ಜಾಗತಿಕ ಪ್ರಕರಣಗಳ ಶೇ.2ರಷ್ಟು ಆಗೇಯ ಏಷ್ಯಾ ಭಾಗದಲ್ಲಿ ಪತ್ತೆಯಾಗಿವೆ. ಆಗ್ನೆಯ ಏಷ್ಯಾ ಪ್ರದೇಶಗಳಲ್ಲಿ ಭಾರತದಲ್ಲಿ ಶೇ.66ರಷ್ಟು ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ಪ್ಲಾಸ್ಟೋಡಿಯಮ್ ಜಿ ವೈವಾಕ್ಸ್ ಕಾರಣದಿಂದ ಶೇ.46ರಷ್ಟು ಪ್ರಕರಣಗಳು ಗುರುತಿಸಲ್ಪಟ್ಟಿವೆ. ಪ್ರಸ್ತುತ ಪ್ರಕರಣಗಳ ಸಂಖ್ಯೆ ಶೇ.76ರಷ್ಟು ಕಡಿಮೆಯಾಗಿದ್ದು, 2000ರಲ್ಲಿ 23 ಮಿಲಿಯನ್ ಇದ್ದ ಪ್ರಕರಣಗಳ ಸಂಖ್ಯೆ 2022ರ ವೇಳೆಗೆ ಸುಮಾರು 5 ಮಿಲಿಯನ್ಗೆ ಇಳಿದಿದೆ. * ಮಲೇರಿಯಾ ರೋಗದ ಲಕ್ಷಣಗಳು : ವಿಪರೀತ ಜ್ವರ, ನಡುಗುವಿಕೆ, ಗಂಟು ಅಥವಾ ಕೀಲುನೋವು, ವಾಂತಿ, ರಕ್ತಹೀನತೆ, ತಲೆ ಸುತ್ತುವುದು, ಉಸಿರು ಕಟ್ಟುವಿಕೆ ಮೊದಲಾದವುಗಳು ಕಾಣಿಸಿಕೊಳ್ಳುತ್ತವೆ. ರೋಗದ ತೀವ್ರತೆ ಜಾಸ್ತಿಯಾದಲ್ಲಿ ಅಕ್ಷಿಪಟಲದ ಹಾನಿ, ಸೆಳೆತ ಅಥವಾ ಅಪಸ್ಮಾರ ಮತ್ತು ಮೂತ್ರದಲ್ಲಿ ರಕ್ತ ಬರುವ ಸಾಧ್ಯತೆಯೂ ಇದೆ. ಮಲೇರಿಯಾ ರೋಗದಲ್ಲಿ ಬರುವ ಜ್ವರ ಪ್ಲಾಸ್ಕೋಡಿಯ ಪರಾವಲಂಬಿಯ ಜಾತಿಯ ಪ್ರಬೇಧಕ್ಕೆ ಅನುಗುಣವಾಗಿ ಇರುತ್ತದೆ.* ಮಲೇರಿಯಾ ರೋಗ ತಡೆಗಟ್ಟುವಿಕೆ ಕ್ರಮಗಳು :- 20-35% N, N-Diethyl-Meta-Toluamide ಕೀಟ ನಿವಾರಕಗಳನ್ನು ದೇಹಕ್ಕೆ ಅನ್ವಯಿಸಿ- ರಾತ್ರಿಯಲ್ಲಿ ಹೊರಗಿರುವಾಗ, ಉದ್ದನೆಯ ತೋಳುಗಳು ಮತ್ತು ಉದ್ದವಾದ ಪ್ಯಾಂಟ್ಗಳನ್ನು ಹೊಂದಿರುವ ಉಡುಪನ್ನು ಧರಿಸಿ- ರಾತ್ರಿಯ ವೇಳೆ ಹಾಸಿಗೆಯ ಮೇಲೆ ಸೊಳ್ಳೆ ಪರದೆಗಳನ್ನು ಬಳಸಿ- ಮಲಗುವ ಮೊದಲು, ಮಲಗುವ ಕೋಣೆಯಲ್ಲಿ ಪೈರೆಥ್ರಿನ್ ಅಥವಾ ಸಂಬಂಧಿತ ಕೀಟನಾಶಕವನ್ನು ಸಿಂಪಡಿಸಿ- ಮನೆಯ ಸುತ್ತಮುತ್ತಲಿನ ನೀರನ್ನು ಎಂದಿಗೂ ನಿಲ್ಲಿಸಬೇಡಿ- ನೀರಿನ ತೊಟ್ಟಿಗಳನ್ನು ಯಾವಾಗಲೂ ಮುಚ್ಚಳದಿಂದ ಮುಚ್ಚಿ