* 1993 ರಲ್ಲಿ 73 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಐತಿಹಾಸಿಕ ದಿನದ ಸ್ಮರಣಾರ್ಥವಾಗಿ ಭಾರತದಲ್ಲಿ ಪ್ರತಿ ವರ್ಷ ಏಪ್ರಿಲ್ 24. 2025 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆ. * ಬಲ್ವಂತ್ ರಾಯ್ ಮೆಹ್ತಾ ಅವರು ಗ್ರಾಮ ಪಂಚಾಯತ್ ವಿಕೇಂದ್ರೀಕರಣವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದರು. ಹಾಗೂ ಬಲ್ವಂತ್ ರಾಯ್ ಮೆಹ್ತಾ ಅವರನ್ನು ಪಂಚಾಯತ್ ರಾಜ್ ಪಿತಾಮಹ ಎಂದು ಕರೆಯಲಾಗುತ್ತದೆ. * ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿದ ಕರ್ನಾಟಕಕ್ಕೆ ಸತತ ಮೂರು ಕೇಂದ್ರ ಸರಕಾರದ ಪ್ರಶಸ್ತಿಯು ಲಭ್ಯವಾಗಿದ್ದು, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದೇಶಕ್ಕೆ ಮಾದರಿಯಾದ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆ 'ರಾಷ್ಟ್ರೀಯ ಇ-ಪುರಸ್ಕಾರ' ಪ್ರಶಸ್ತಿ ದೊರೆತಿದೆ.* ರಾಷ್ಟ್ರೀಯ ಪಂಚಾಯತ್ ರಾಜ್ ದಿನದ 2025 ರ ಅಧಿಕೃತ ಥೀಮ್ ಅನ್ನು ಸರ್ಕಾರವು ಇನ್ನೂ ಘೋಷಿಸಿಲ್ಲ.* ಭಾರತ ದೇಶದಲ್ಲಿ ಕರ್ನಾಟಕವು ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು.* ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ರಾಜ್ ಪುರಸ್ಕಾರಕ್ಕೆ ಈ ಬಾರಿ ಹಾಸನದ ಬಿರಡಹಳ್ಳಿ ಗ್ರಾಮ ಪಂಚಾಯತ್ ಭಾಜನವಾಗಿದೆ. * ಕ್ರಿಯಾಶೀಲ ಆಡಳಿತ, ಉತ್ತಮ ಸೇವೆ, ನವೀನ ತಂತ್ರಜ್ಞಾನಗಳ ಅಳವಡಿಕೆಯನ್ನು ಪರಿಗಣಿಸಿ, ಹವಾಮಾನ ಕ್ರಿಯಾ ವಿಶೇಷ ಪಂಚಾಯತ್ ವಿಭಾಗದ (ಕ್ಲೈಮೆಟ್ ಆಕ್ಷನ್ ಸ್ಪೆಷಲ್ ಪಂಚಾಯತ್ ಅವಾರ್ಡ್) ಪ್ರಶಸ್ತಿಗೆ ಆಯ್ಕೆಯಾಗಿದೆ. * ಇದಲ್ಲದೇ ಇದೇ ವಿಭಾಗದ ಪ್ರಶಸ್ತಿಗೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ದವ್ವಾ ಎಸ್ ಗ್ರಾಮ ಪಂಚಾಯತ್, ಬಿಹಾರದ ಸಮಸ್ತಿಪುರ ಜಿಲ್ಲೆಯ ಮೋತಿಪುರ್ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.