* ವಿಶ್ವ ಭೂ ದಿನವನ್ನು ಅಂತರಾಷ್ಟ್ರೀಯ ಮಾತೃ ಭೂಮಿಯ ದಿನ ಎಂದೂ ಕರೆಯುತ್ತಾರೆ, ಇದು ಪರಿಸರ ಸುಸ್ಥಿರತೆ ಮತ್ತು ಜಾಗೃತಿಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ಏಪ್ರಿಲ್ 22. 2024 ರಂದು ಈ ದಿನವನ್ನು ಆಚರಿಸಲಾಗುತ್ತದೆ.* ವಿಶ್ವ ಭೂಮಿ ದಿನದ 2024 ರ ಥೀಮ್ " ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್" ಎಂಬುದು ಥೀಮ್ ಆಗಿದೆ.* 1960 ರ ದಶಕದ ಉತ್ತರಾರ್ಧದಲ್ಲಿ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಚರ್ಚೆಯಲ್ಲಿ ಏರಿಕೆ ಕಂಡಿತು, ರಾಚೆಲ್ ಕಾರ್ಸನ್ ಅವರ ಪ್ರಭಾವಶಾಲಿ ಪುಸ್ತಕ 'ಸೈಲೆಂಟ್ ಸ್ಪ್ರಿಂಗ್' (1962) ಮತ್ತು 'ಸಾಂಟಾ ಬಾರ್ಬರಾ ತೈಲ ಸೋರಿಕೆ' (1969) ಪರಿಸರ ನಾಶದ ಬಗ್ಗೆ ಜಾಗೃತಿ ಮೂಡಿಸಿತು. * ಏಪ್ರಿಲ್ 22, 1970 ರಂದು ಸ್ಕಾನ್ ಫ್ರಾನ್ಸಿಸ್ಕೊದ ಸಮ್ಮೇಳನದಲ್ಲಿ ಶಾಂತಿ ಹೋರಾಟಗಾರರಾದ ಜಾನ್ ಮೇಕ್ ಕಾನ್ನೆಲ್ ರವರು ಮಾತೃ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ವಿಶ್ವ ಭೂಮಿ ದಿನದ ಪ್ರಸ್ತಾವನೆಯ ನಂತರ ವಿಶ್ವ ಭೂಮಿ  ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ‌* ಏಪ್ರಿಲ್ 22 ರಂದು ವಿಶ್ವ ಭೂಮಿ ದಿನದ ಆಚರಣೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈ ಸಮಯದಲ್ಲಿ ಉತ್ತರ ಗೋಳಾರ್ಧದಲ್ಲಿ ವಸಂತಕಾಲ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಶರತ್ಕಾಲವಿರುತ್ತದೆ. ಹಾಗಾಗಿ, ಹವಾಮಾನ ಸಹ ಸಹನೀಯವಾಗಿರುವುದರಿಂದ, ಭೂ ದಿನದ ಆಚರಣೆ ಹೆಚ್ಚು ಆಹ್ಲಾದಕರವಾಗಿರುತ್ತದೆ.* ವಿಶ್ವ ಭೂ ದಿನದ (WED) ಗಾಗಿ ವರ್ಷದಿಂದ ವರ್ಷಕ್ಕೆ ಥೀಮ್‌ಗಳು:WED 2023 ಥೀಮ್: ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿWED 2022 ಥೀಮ್: ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿWED 2021 ಥೀಮ್: ನಮ್ಮ ಭೂಮಿಯನ್ನು ಮರುಸ್ಥಾಪಿಸಿWED 2020 ಥೀಮ್: ಹವಾಮಾನ ಕ್ರಿಯೆWED 2019 ಥೀಮ್: ನಮ್ಮ ಜಾತಿಗಳನ್ನು ರಕ್ಷಿಸಿWED 2018 ಥೀಮ್: ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿWED 2017 ಥೀಮ್: ಪರಿಸರ ಮತ್ತು ಹವಾಮಾನ ಸಾಕ್ಷರತೆ