* ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಪ್ರತಿವರ್ಷ ಏಪ್ರಿಲ್ 21 ರಂದು ಆಚರಿಸಲಾಗುತ್ತದೆ. * ಈ ದಿನವನ್ನು ಆಚರಿಸುವ ಉದ್ದೇಶವು ದೇಶದ ಅಭಿವೃದ್ಧಿಗೆ ಬಹುಮುಖ್ಯವಾದ ನಾಗರಿಕ ಸೇವಾ ಅಧಿಕಾರಿಗಳ ಕಠಿಣ ಪರಿಶ್ರಮ, ಬದ್ಧತೆ ಹಾಗೂ ಸೇವಾ ಮನೋಭಾವನೆಯನ್ನು ಗೌರವಿಸುವುದು ಮತ್ತು ಗುರುತಿಸುವುದಾಗಿದೆ.* ಪ್ರತಿಯೊಂದು ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರವೇ ದೇಶ ಸುದೃಢವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗರಿಕ ಸೇವೆಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಲಾಗುತ್ತದೆ.* ಅಧಿಕಾರಿಗಳು ಆಡಳಿತದಲ್ಲಿ ಶಿಸ್ತು, ಪರಿಪಾಟಿ ಹಾಗೂ ಸಮರ್ಪಣೆಯೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಈ ಕಾರಣದಿಂದಾಗಿ ಅವರ ಕಾರ್ಯವನ್ನು ಗೌರವಿಸುವ ದಿನವಿದು.* ಈ ದಿನವನ್ನು ಆಚರಿಸಲು ಪ್ರೇರಣೆಯಾಗಿದ್ದು 1947ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನವದೆಹಲಿಯ ಮೆಟ್ಕಾಫ್ ಹೌಸ್ನಲ್ಲಿ ನಾಗರಿಕ ಸೇವಾ ಅಧಿಕಾರಿಗಳಿಗೆ ಮಾಡಿದ ಭಾಷಣ. ಅದನ್ನು ಸ್ಮರಿಸೋ ಸಲುವಾಗಿ 2006 ರಿಂದ ಈ ದಿನವನ್ನು ಅಧಿಕೃತವಾಗಿ ಆಚರಿಸಲಾಗುತ್ತಿದೆ.* ಈ ದಿನದ ಅಂಗವಾಗಿ ಕೇಂದ್ರ ಮತ್ತು ರಾಜ್ಯಗಳ ಆದರ್ಶ ನಾಗರಿಕ ಸೇವಕರಿಗೆ ಪ್ರಧಾನ ಮಂತ್ರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜೊತೆಗೆ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಈ ದಿನದ ಮಹತ್ವವನ್ನು ವಿಶಾಲವಾಗಿ ಹಂಚಿಕೊಳ್ಳಲಾಗುತ್ತದೆ.