* ವಿಶ್ವ ಪ್ರಸಿದ್ಧ ಕಲಾವಿದ ಮೊನಾಲಿಸಾ ವರ್ಣ ಚಿತ್ರದ ಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮದಿನದ ಗೌರವಾರ್ಥವಾಗಿ ಏಪ್ರಿಲ್ 15. 2024 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ.* 2025 ರ ವಿಶ್ವ ಕಲಾ ದಿನದ ಥೀಮ್ "ಅಭಿವ್ಯಕ್ತಿಯ ಉದ್ಯಾನ: ಕಲೆಯ ಮೂಲಕ ಸಮುದಾಯವನ್ನು ಬೆಳೆಸುವುದು" ಥೀಮ್ ಆಗಿದೆ.* ವಿಶ್ವ ಕಲಾ ದಿನದ ಅಧಿಕೃತ ಆಚರಣೆಯನ್ನು 2015 ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಸಲಾಯಿತು. ನಂತರ 2019 ರಲ್ಲಿ ಯುನೆಸ್ಕೋ ಅಧಿಕೃತವಾಗಿ ವಿಶ್ವ ಕಲಾದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 15 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.* ಈ ದಿನವು ಅವರ ಕಲೆಗಳ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರತಿಪಾದಿಸುತ್ತದೆ, ಚಿತ್ರಕಲೆ, ಶಿಲ್ಪಕಲೆ, ಕರಕುಶಲ, ಸಾಹಿತ್ಯ, ಸಂಗೀತ ಮತ್ತು ನೃತ್ಯದಂತಹ ಹಲವಾರು ಕ್ಷೇತ್ರಗಳನ್ನು ಒಳಗೊಂಡಿದೆ.* 2019 ರಲ್ಲಿ ಯುನೆಸ್ಕೋದ 40 ನೇ ಸಾಮಾನ್ಯ ಸಮ್ಮೇಳನದಲ್ಲಿ ಸ್ಥಾಪಿಸಲಾದ ವಿಶ್ವ ಕಲಾ ದಿನವು ವಿಶ್ವಾದ್ಯಂತ ಕಲೆಯ ಬೆಳವಣಿಗೆ, ಪ್ರಸರಣ ಮತ್ತು ಮೆಚ್ಚುಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.