* ವಿಶ್ವಸಂಸ್ಥೆಯ ಸಾಮಾನ್ಯಸಭೆ ಪ್ರತಿವರ್ಷ ಡಿಸೆಂಬರ್ 4ರಂದು 'ಏಕಪಕ್ಷೀಯ ದಬ್ಬಾಳಿಕೆ ವಿರೋಧಿ ಅಂತಾರಾಷ್ಟ್ರೀಯ ದಿನ' ಆಚರಿಸಲು ನಿರ್ಣಯ ಕೈಗೊಂಡಿದೆ.* ಈ ನಿರ್ಣಯಕ್ಕೆ 116 ದೇಶಗಳು ಬೆಂಬಲ ನೀಡಿದ್ದು, 51 ದೇಶಗಳು ವಿರೋಧ ವ್ಯಕ್ತಪಡಿಸಿವೆ.* ಅಮೆರಿಕ, ಕೆನಡಾ, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಯೂನಿಯನ್ ಈ ನಿರ್ಣಯದ ವಿರುದ್ಧ ಮತಹಾಕಿವೆ.* ವಿಶ್ವಸಂಸ್ಥೆಯ ಪ್ರಕಾರ, ಅಂತಾರಾಷ್ಟ್ರೀಯ ಕಾನೂನು ಹಾಗೂ ತನ್ನ ಸಂವಿಧಾನಕ್ಕೆ ಅನುಗುಣವಲ್ಲದ ಏಕಪಕ್ಷೀಯ ಆರ್ಥಿಕ ಅಥವಾ ವ್ಯಾಪಾರ ನಿರ್ಬಂಧಗಳು ಅನುದಾನಿತ ರಾಷ್ಟ್ರಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ.* ಈ ದಿನಾಚರಣೆ ಬಲವಂತದ ಕ್ರಮಗಳಿಂದ ಉಂಟಾಗುವ ಹಾನಿಕರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರಾಷ್ಟ್ರಗಳ ಪರಸ್ಪರ ಸಹಕಾರ ಮತ್ತು ಐಕ್ಯತೆಯನ್ನು ಉತ್ತೇಜಿಸಲು ಉದ್ದೇಶಿತವಾಗಿದೆ.* ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳು, ವೀಕ್ಷಕರು, ಸಂಸ್ಥೆಗಳು ಹಾಗೂ ನಾಗರಿಕ ಸಮಾಜದ ಪಾಲುದಾರರನ್ನು ಈ ದಿನಾಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಿದೆ.