* ಏಕ ಕಾಲದಲ್ಲಿ 25 ಕಿ. ಮೀ. ವ್ಯಾಪ್ತಿಯಲ್ಲಿ ನಾಲ್ಕು ವೈಮಾನಿಕ ಗುರಿಗಳನ್ನು ಹೊಡೆದುರುಳಿಸುವ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.* 'ಒಮ್ಮೆಗೆ ಉಡಾಯಿಸುವ ಕ್ಷಿಪಣಿ ವ್ಯವಸ್ಥೆ (ಸಿಂಗಲ್ ಫೈರಿಂಗ್ ಯೂನಿಟ್) ಬಳಸಿ ಕಮಾಂಡ್ ಮಾರ್ಗದರ್ಶನದ ಮೂಲಕ 25 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲೇ ನಿಗದಿಪಡಿಸಿದ್ದ ನಾಲ್ಕು ವೈಮಾನಿಕ ಗುರಿಗಳನ್ನು ಏಕಕಾಲದಲ್ಲಿ ಭೇದಿಸುವ ಮೂಲಕ ಸಾಮರ್ಥ್ಯ ಪ್ರದರ್ಶಿಸಲಾಯಿತು. *ಆಕಾಶ್ ಕ್ಷಿಪಣಿ ವ್ಯವಸ್ಥೆಯ ಇಂತಹ ಸಾಮರ್ಥ್ಯ ಹೊಂದಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ' ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ. ಆಂಧ್ರ ಪ್ರದೇಶದ ಸೂರ್ಯಲಂಕಾ ಏರ್ ಪೋರ್ಟ್ ಸ್ಟೇಷನ್ ನಲ್ಲಿ ಭಾರತೀಯ ವಾಯುಪಡೆ ಡಿಸೆಂಬರ್.12ರಂದು ನಡೆಸಿದ 'ಅಸ್ತ್ರಶಕ್ತಿ' ಸೇನಾ ಸಮರಾಭ್ಯಾಸದಲ್ಲಿ ಸ್ವದೇಶಿ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯ ಪ್ರದರ್ಶಿಸಲಾಯಿತು.* ಆಕಾಶ ಫೈರಿಂಗ್ ಘಟಕವನ್ನು ಫೈರಿಂಗ್ ಲೆವೆಲ್ ರಾಡಾರ್ (ಆಫ್ ಎಲ್ ಆರ್) ಫೈರಿಂಗ್ ಕಂಟ್ರೋಲ್ ಸೆಂಟರ್ ಮತ್ತು ಐದು ಸಶಸ್ತ್ರ ಕ್ಷಿಪಣಿ ಹೊಂದಿರುವ ಎರಡು ಆಕಾಶ್ ಏರ್ ಫೋರ್ಸ್ ಲಾಂಚನರ್ ಗಳೊಂದಿಗೆ (ಎಎಎಫ್‌ಎಲ್) ನಿಯೋಜಿಸಲಾಗಿದೆ.