* ಹೆಚ್.ಎಸ್.ವೆಂಕಟೇಶಮೂರ್ತಿ (ಎಚ್ಎಸ್ವಿ) ಕನ್ನಡದ ಖ್ಯಾತ ಕವಿ, ಸಾಹಿತಿ ಹಾಗೂ ನಾಟಕಕಾರರಾಗಿದ್ದ ಅವರು 80 ವರ್ಷ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಮೇ 30ರಂದು ನಿಧನರಾದರು.* ಎಚ್ಎಸ್ವಿ 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಹೊದಿಗೆರೆ ಗ್ರಾಮದಲ್ಲಿ ಜನಿಸಿದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಮ್.ಎ ಪಡೆದ ಬಳಿಕ 30 ವರ್ಷಗಳ ಕಾಲ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.* ಅವರು “ಕಥನ ಕವನಗಳು” ಮಹಾಪ್ರಬಂಧಕ್ಕೆ ಪಿಎಚ್.ಡಿ ಪಡೆದಿದ್ದು, 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಕವನ, ನಾಟಕ, ಮಕ್ಕಳ ಸಾಹಿತ್ಯ, ಕಾದಂಬರಿ, ಕಥಾಸಂಕಲನಗಳಲ್ಲಿ ಎಚ್ಎಸ್ವಿ ಮಹತ್ವದ ಕೊಡುಗೆ ನೀಡಿದ್ದಾರೆ.* ಚಿತ್ರರಂಗ, ಧಾರಾವಾಹಿಗಳಿಗೂ ಅವರು ಸಾಹಿತ್ಯ ಹಾಗೂ ಗೀತರಚನೆ ಮೂಲಕ ತಮ್ಮ ಛಾಪು ಮೂಡಿಸಿದ್ದರು.* ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು, ಹಲವು ರಾಜ್ಯ ಹಾಗೂ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.* ಎಚ್ಎಸ್ವಿ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಗುರುತಿಸಿಕೊಂಡು, ಹೃದಯಕ್ಕೆ ಸ್ಪರ್ಶಿಸುವ ಹಾಡುಗಳ ಮೂಲಕ ಜನಮನ ಗೆದ್ದ ಕವಿಯಾಗಿದ್ದರು.