* ಕೃತಕ ಬುದ್ಧಿಮತ್ತೆಯ(AI) ಮೌಲ್ಯಗಳನ್ನು ಉಳಿಸಿ, ಅಪಾಯಗಳನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನದಂಡಗಳನ್ನು ರಚಿಸಲು ಒಟ್ಟಾಗಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.* ‘ರಾಜಕೀಯ, ಆರ್ಥಿಕತೆ, ಭದ್ರತೆ ಮತ್ತು ಸಮಾಜಕ್ಕೆ ಎಐ ದೊಡ್ಡ ಸವಾಲಾಗಿದೆ. ಈ ಶತಮಾನದಲ್ಲಿ ಎಐ ಮಾನವಿಯತೆಯ ನಿಯಮಗಳನ್ನು (ಕೋಡಿಂಗ್) ಬರೆಯುತ್ತಿದೆ’ ಎಂದು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಜೊತೆ ‘ಎಐ ಆ್ಯಕ್ಷನ್’ ಶೃಂಗದ ಸಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.* ‘ತಂತ್ರಜ್ಞಾನದಿಂದ ಉದ್ಯೋಗಗಳ ನಷ್ಟವಾಗುವುದಿಲ್ಲ. ಬದಲಾಗಿ ಉದ್ಯೋಗದ ಸ್ವರೂಪ ಬದಲಾಗುತ್ತದೆ ಮತ್ತು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದು ಮೋದಿ ಅವರು ಎಐ ತಂತ್ರಜ್ಞಾನದಿಂದಾಗಿ ಉದ್ಯೋಗ ನಷ್ಟವಾಗುತ್ತಿದೆ ಎಂಬ ಆತಂಕಗಳ ಬಗ್ಗೆ ಪ್ರಸ್ತಾಪಿಸಿದರು.* ‘ಎಐ ಚಾಲಿತ ಭವಿಷ್ಯಕ್ಕಾಗಿ ನಮ್ಮ ಜನರನ್ನು ಕೌಶಲಯುತರನ್ನಾಗಿ ಮಾಡಬೇಕಿದೆ’ ಎಂದೂ ಅವರು ಪ್ರತಿಪಾದಿಸಿದರು.* ಎಐ ಚಾಲಿತ ಭವಿಷ್ಯಕ್ಕೆ ಜನರನ್ನು ಕೌಶಲ್ಯಯುತರಾಗಿಸುವ ಅಗತ್ಯವಿದೆ. ದಕ್ಷಿಣ ದೇಶಗಳಲ್ಲಿ ಸಂಪತ್ತು ಇದ್ದರೂ ಸಾಮರ್ಥ್ಯ ಕೊರತೆಯಿರುವುದನ್ನು ಚರ್ಚಿಸಿ, ಅನ್ವೇಷಣೆ ಮತ್ತು ಆಡಳಿತದ ಮಹತ್ವವನ್ನು ಚರ್ಚಿಹಸಬೇಕು ಎಂದು ಹೇಳಿದರು.* ತಂತ್ರಜ್ಞಾನವನ್ನು ಜನಕೆಂದ್ರಿತವಾಗಿ ಅಭಿವೃದ್ಧಿಪಡಿಸಿ, ಸೈಬರ್ ಸುರಕ್ಷತೆಯನ್ನು ಬಲಪಡಿಸಿ, ಮತ್ತು ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಎಐ ಬಳಸಿ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು.* ಫ್ರಾನ್ಸ್ನಲ್ಲಿ ನಡೆದ ಎಐ ಆಕ್ಷನ್ ಶೃಂಗದಲ್ಲಿ, ಮುಂದಿನ ಎಐ ಶೃಂಗ ಭಾರತದಲ್ಲಿ ನಡೆಯಲಿದ್ದು, ಭಾರತದ ಪ್ರಧಾನಿ ಮೋದಿ ಸಂತೋಷ ವ್ಯಕ್ತಪಡಿಸಿದರು. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಶೃಂಗದಲ್ಲಿ ಎಐ ಫೌಂಡೇಶನ್ ಮತ್ತು ಸುಸ್ಥಿರ ಎಐ ಕೌನ್ಸಿಲ್ ರಚನೆ ನಿರ್ಧಾರ ಕೈಗೊಳ್ಳಲಾಯಿತು.