* ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ವಯಸ್ಕರು ವೈದ್ಯರ ಸಹಕಾರದೊಂದಿಗೆ ನಿಧನ ಹೊಂದಲು ಅವಕಾಶ ನೀಡುವ 'ಅನಾರೋಗ್ಯ ಪೀಡಿತ ವಯಸ್ಕರ ಜೀವ ಅಂತ್ಯ' (ಟರ್ಮಿನಲಿ ಇಲ್ ಅಡಲ್ಟ್ಸ್ ಎಂಡ್ ಆಫ್ ಲೈಫ್) ವಿಧೇಯಕ ಬ್ರಿಟನ್ ಸಂಸತ್ ನಲ್ಲಿ ಅಂಗೀಕಾರಗೊಂಡಿದೆ.* ಈ ವಿಧೇಯಕದ ಪ್ರಕಾರ ಬ್ರಿಟನ್ ಹಾಗೂ ವೇಲ್ಸ್ನಲ್ಲಿ ಆರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಯಸ್ಕರು ವೈದ್ಯರ ವೈದ್ಯಕೀಯ ಉಪಚಾರದ ಮೂಲಕ ಮರಣ ಹೊಂದುವುದಕ್ಕೆ ಅವಕಾಶ ನೀಡಲಾಗಿದೆ.* 'ಹೌಸ್ ಆಫ್ ಕಾಮನ್ಸ್'ನಲ್ಲಿ ವಿಧೇಯಕದ ಪರವಾಗಿ 330, ವಿರುದ್ಧವಾಗಿ 275 ಮತಗಳು ಚಲಾವಣೆಯಾಗಿವೆ. ಬ್ರಿಟನ್ ಸಂಸತ್ ಅಂಗೀಕರಿಸಿರುವ ವಿವಾದಾತ್ಮಕ ವಿಧೇಯಕ ದೇಶದಲ್ಲಿ ಪರ ವಿರೋಧದ ಚರ್ಚೆ ಹುಟ್ಟು ಹಾಕಿದೆ.* ಮಾರಣಾಂತಿಕ ಕಾಯಿಲೆ ಇರುವವರು ಗೌರವಯುತ ಜೀವ ಅಂತ್ಯಕ್ಕೆ ಈ ವಿಧೇಯಕ ನೆರವಾಗಲಿದೆ. ಅನಾರೋಗ್ಯ ಪೀಡಿತರನ್ನು ಆರು ತಿಂಗಳು ಕಾಲ ಆರೈಕೆ ಮಾಡುವವರು ಯಾರು ಎಂಬ ಪ್ರಶ್ನೆಯನ್ನು ಕೆಲವರು ಹುಟ್ಟು ಹಾಕಿದ್ದಾರೆ.* ಅಂಗೀಕೃತ ವಿಧೇಯಕದ ಪ್ರಕಾರ ಬ್ರಿಟನ್ ಹಾಗೂ ವೇಲ್ಸ್ನಲ್ಲಿ ಆರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಯಸ್ಕರು ವೈದ್ಯರ ವೈದ್ಯಕೀಯ ಉಪಚಾರದ ಮೂಲಕ ಮರಣ ಹೊಂದುವುದಕ್ಕೆ ಅವಕಾಶ ನೀಡಲಾಗಿದೆ.* ಮಾರಣಾಂತಿಕ ರೋಗದಿಂದ ಬಳಲುವ ಜನರ ನೋವು ಕಡಿಮೆ ಮಾಡುವ ಉದ್ದೇಶದ ವಿಧೇಯಕ ರೋಗಿಗಳ ಗೌರವಯುತವಾಗಿ ತಮ್ಮ ಜೀವ ಕಳೆದುಕೊಳ್ಳಲು ಅವಕಾಶ ನೀಡಲಿದೆ ಎಂದು ವಿಧೇಯಕದ ಪರ ಮತ ಚಲಾಯಿಸಿದವರು ಅಭಿಪ್ರಾಯಪಟ್ಟಿದ್ದಾರೆ.* ದಯಾಮರಣವನ್ನು ಸಾಮಾನ್ಯವಾಗಿ "ಕರುಣೆ ಕೊಲ್ಲುವಿಕೆ" ಎಂದು ಕರೆಯಲಾಗುತ್ತದೆ, ಇದು ನೋವು ಮತ್ತು ಸಂಕಟವನ್ನು ನಿವಾರಿಸಲು ಉದ್ದೇಶಪೂರ್ವಕವಾಗಿ ಜೀವನವನ್ನು ಕೊನೆಗೊಳಿಸುವ ಅಭ್ಯಾಸವಾಗಿದೆ.* "ದಯಾಮರಣ" ಎಂಬ ಪದವು ಗ್ರೀಕ್ ಪದಗಳಾದ " ಯು " (ಒಳ್ಳೆಯದು) ಮತ್ತು " ಥಾನಟೋಸ್ " (ಸಾವು) ನಿಂದ ಬಂದಿದೆ.