* ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ವಹಿವಾಟು ಹೆಚ್ಚಿಸಲು ಮತ್ತು ಭಾರತದ ರಫ್ತುದಾರರಿಗೆ ಅನುಕೂಲ ಒದಗಿಸಲು ಭಾರತ್ ಮಾರ್ಟ್ ನೆರವಾಗಲಿದೆ. ವರದಿ ಪ್ರಕಾರ 2025ರೊಳಗೆ ಭಾರತ್ ಮಾರ್ಟ್ ಕಾರ್ಯಾಚರಣೆಯಲ್ಲಿ ಇರಲಿದೆ. * ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್ (dragon mart) ಇದೆ. ಅದೇ ಮಾದರಿಯಲ್ಲಿ ಭಾರತ್ ಮಾರ್ಟ್ ಅನ್ನು ನಿರ್ಮಿಸಬಹುದು ಎನ್ನಲಾಗಿದೆ.* ಯುಎಇಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ಬಾಂಧವ್ಯ ಗಟ್ಟಿಗೊಳಿಸು ಕೆಲಸ ಮಾಡುತ್ತಿದ್ದಾರೆ. ದುಬೈನಲ್ಲಿ ಭಾರತ್ ಮಾರ್ಟ್ ಎಂಬ ಬೃಹತ್ ಮಳಿಗೆ ಮತ್ತು ಉಗ್ರಾಣ ಸೌಲಭ್ಯಕ್ಕೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಚಾಲನೆ ಕೊಟ್ಟಿದ್ದಾರೆ.* ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮಹಮದ್ ಬಿನ್ ರಶೀದ್ ಅಲ್ ಮಕ್ಟೋಮ್ ದುಬೈನಲ್ಲಿ 'ಭಾರತ್ ಮಾರ್ಟ್' ಅನ್ನು ಇತ್ತೀಚೆಗೆ ಜಂಟಿಯಾಗಿ ಉದ್ಘಾಟಿಸಿದರು.* ದುಬೈ ಮೂಲದ ಡಿಪಿ ವರ್ಲ್ಡ್ ಮತ್ತು ಭಾರತದ ವಾಣಿಜ್ಯ ಸಚಿವಾಲಯ ಜಂಟಿಯಾಗಿ ಭಾರತ್ ಮಾರ್ಟ್ ಅನ್ನು ಸ್ಥಾಪಿಸಿವೆ. ಭಾರತದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ರಪ್ತಿಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.* ಭಾರತೀಯ ಉತ್ಪಾದಕರು, ವರ್ತಕರು ಮತ್ತು ರಫ್ತುದಾರರಿಗೆ ತಮ್ಮ ಉತ್ಪನ್ನಗಳು ಹಾಗೂ ಸೇವೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದ ಹೈಬ್ರಿಡ್ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಪ್ರದೇಶವಾಗಿ ಕಾರ್ಯನಿರ್ವಹಿಸುವಂತೆ ಭಾರತ್ ಮಾರ್ಟ್ ಅನ್ನು ರೂಪಿಸಲಾಗಿದೆ.* ಭಾರತ ಮತ್ತು ಯುಎಇ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಡಂಬಡಿಕೆ (ಸಿಇಪಿಎ) ಹೊಂದಿರುವ ದೃಷ್ಟಿಕೋನವನ್ನು ವಿಸ್ತರಿಸಲು ಭಾರತ್ ಮಾರ್ಟ್ ವೇದಿಕೆ ನೆರವಾಗಲಿದೆ. 2022ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.