* ದೃಷ್ಟಿ ದೋಷವುಳ್ಳವರಿಗೆ ನ್ಯಾಯಾಂಗ ಸೇವೆಗಳಲ್ಲಿ ನೇಮಕಾತಿಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ(ಮಾರ್ಚ್ 3) ಮಹತ್ವದ ತೀರ್ಪಿನಲ್ಲಿ ಹೇಳಿದೆ.* ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ನೇತೃತ್ವದ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ಕಳೆದ ವರ್ಷ ಡಿಸೆಂಬರ್ 3 ರಂದು ಕೆಲವು ರಾಜ್ಯಗಳ ನ್ಯಾಯಾಂಗ ಸೇವೆಯಲ್ಲಿ ಮೀಸಲಾತಿ ನಿರಾಕರಣೆಗೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿತ್ತು.* ಮಧ್ಯಪ್ರದೇಶದ ಅಂಧ ಅಭ್ಯರ್ಥಿಯ ತಾಯಿಯ ಸ್ವಯಂ ಪ್ರೇರಿತ ಅರ್ಜಿಯನ್ನು ಸ್ವೀಕರಿಸಿದ ನಂತರ, ಸುಪ್ರೀಂ ಕೋರ್ಟ್ ಈ ಪತ್ರವನ್ನು ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿತು ಮತ್ತು ಅದನ್ನು ಸ್ವಂತವಾಗಿ ವಿಚಾರಣೆ ಮಾಡಲು ನಿರ್ಧರಿಸಿತು.* ನ್ಯಾಯಮೂರ್ತಿ ಮಹದೇವನ್ ತೀರ್ಪಿನಲ್ಲಿ ದೇಹ ದೌರ್ಬಲ್ಯವನ್ನು ಆಧರಿಸಿ ನ್ಯಾಯಾಂಗ ನೇಮಕಾತಿಯಲ್ಲಿ ತಾರತಮ್ಯ ಮಾಡಲಾಗದು ಎಂದು ತಿಳಿಸಿದ್ದಾರೆ. ಅಂಗವೈಕಲ್ಯ ಕಾರಣದಿಂದ ಯಾರನ್ನೂ ದೂರವಿಡಬಾರದು ಮತ್ತು ಅವರನ್ನು ಒಳಗೊಂಡ ಚೌಕಟ್ಟನ್ನು ರಾಜ್ಯವು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.* ನ್ಯಾಯಮೂರ್ತಿ ಮಹಾದೇವನ್ ಅವರು, ಅಂಗವೈಕಲ್ಯದ ಕಾರಣದಿಂದ ನ್ಯಾಯಾಂಗ ಸೇವೆಯಲ್ಲಿ ನೇಮಕಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ಮಹತ್ವದ ತೀರ್ಪು ನೀಡಿದ್ದಾರೆ.