* ಡ್ರೋನ್ ಮೂಲಕ ಉಡಾಯಿಸಬಹುದಾದ ಗುರಿ ನಿರ್ದೇಶಿತ ಕ್ಷಿಪಣಿಯ (ULPGM-V3) ಪರೀಕ್ಷಾರ್ಥ ಉಡಾವಣೆಯನ್ನು ಆಂಧ್ರಪ್ರದೇಶದ ಕರ್ನೂಲ್ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಯಶಸ್ವಿಯಾಗಿ ನಡೆಸಿದೆ.* ಶುಕ್ರವಾರ(ಜುಲೈ 25) ಈ ಪ್ರಯೋಗ ನಡೆದಿದ್ದು, ಇದರ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.* “ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಕರ್ನೂಲ್ನ ರಾಷ್ಟ್ರೀಯ ಮುಕ್ತ ಪ್ರದೇಶ ಶ್ರೇಣಿಯಲ್ಲಿ ಡಿಆರ್ಡಿಓ ಯುಎವಿ ಉಡಾವಣಾ ಗುರಿ ನಿರ್ದೇಶಿತ ಕ್ಷಿಪಣಿ ULPGM-V3ಯ ಹಾರಾಟ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ” ಎಂದು ಹೇಳಿದ್ದಾರೆ.* ಈ ಸಾಧನೆಗಾಗಿ ಡಿಆರ್ಡಿಓ, ಅದರ ಉದ್ಯಮ ಪಾಲುದಾರರು ಮತ್ತು ಸ್ಟಾರ್ಟ್ಅಪ್ಗಳಿಗೆ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ.* ULPGM-V3 "ಫೈರ್-ಅಂಡ್-ಫರ್ಗೆಟ್" ಶೈಲಿಯ ಎಯರ್-ಟು-ಸರ್ಫೇಸ್ ಕ್ಷಿಪಣಿಯಾಗಿದ್ದು, ಇಮೇಜಿಂಗ್ ಇನ್ಫ್ರಾರೆಡ್ ಸೀಕರ್ ಹೊಂದಿರುವ ಪ್ಯಾಸಿವ್ ಹೋಮಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ.* ಇದು ಹಗಲು ಮತ್ತು ರಾತ್ರಿ ಎರಡೂ ಸಂದರ್ಭಗಳಲ್ಲಿ ಗುರಿಯ ಮೇಲೆ ನಿಖರ ದಾಳಿ ಮಾಡಲು ಅನುಕೂಲವಾಗುತ್ತದೆ.* ಈ ಕ್ಷಿಪಣಿ ತೂಕ 12.5 ಕೆಜಿ ಆಗಿದ್ದು, ಡ್ಯೂಯಲ್-ಥ್ರಸ್ಟ್ ಪ್ರೊಪಲ್ಷನ್ ಮೂಲಕ 4 ಕಿ.ಮೀ. (ಹಗಲು) ಮತ್ತು 2.5 ಕಿ.ಮೀ. (ರಾತ್ರಿ) ವ್ಯಾಪ್ತಿ ಹೊಂದಿದೆ. ಇದು ಸ್ಥಿರ ಹಾಗೂ ಚಲಿಸುತ್ತಿರುವ ಗುರಿಗಳಿಗೆ ದಾಳಿ ಮಾಡಲು ಡಾಟಾ ಲಿಂಕ್ ಮತ್ತು ವಿಭಿನ್ನ ವಾರ್ಹೆಡ್ ಆಯ್ಕೆಗಳನ್ನು ಒದಗಿಸುತ್ತದೆ.* ಈ ಯಶಸ್ಸು ಭಾರತವನ್ನು ಸ್ವಾವಲಂಬಿ ರಕ್ಷಣಾ ತಂತ್ರಜ್ಞಾನದ ಹೊಸ ಹಂತಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ.