* 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸ್ಪರ್ಧೆಗಳು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮಾನಾ ನಗರದಲ್ಲಿ ನಡೆಯಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದೆ.* 128 ವರ್ಷಗಳ ಹಿಂದೆ ಒಮ್ಮೆ ಮಾತ್ರ ಒಲಿಂಪಿಕ್ಸ್ನಲ್ಲಿ ಸೇರಿದ್ದ ಕ್ರಿಕೆಟ್, ಈಗ ಪುನಃ ಮರಳಿ ಬರುತ್ತಿದ್ದು, ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ 6 ತಂಡಗಳು ಭಾಗವಹಿಸಲಿವೆ.* ಲಾಸ್ ಏಂಜಲೀಸ್ನಿಂದ 48 ಕಿ.ಮೀ ದೂರದಲ್ಲಿರುವ ಪೊಮಾನಾ ಪ್ರಸ್ತುತ ಕ್ರಿಕೆಟ್ ಕ್ರೀಡಾಂಗಣವಿಲ್ಲದ ಸ್ಥಳ. ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳು, ವ್ಯಾಪಾರ, ಶಿಕ್ಷಣ ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಬಳಸುವ ಸ್ಥಳವೊಂದರಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.* ಈ ತೀರ್ಮಾನವನ್ನು ಐಸಿಸಿ ಅಧ್ಯಕ್ಷ ಜಯ್ ಶಾ ಒಲಿಸಿ, “ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡು, ಈ ಕ್ರೀಡೆಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಲು ಇದು ಮಹತ್ತ್ವದ ಹೆಜ್ಜೆಯಾಗಿದೆ. ಹೊಸ ಪ್ರೇಕ್ಷಕರನ್ನು ಆಕರ್ಷಿಸಲು ಸಹಾಯವಾಗಲಿದೆ,” ಎಂದು ಹೇಳಿದ್ದಾರೆ.* 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಜೊತೆಗೆ ಬೇಸ್ಬಾಲ್/ಸಾಫ್ಟ್ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್ (ಸಿಕ್ಸರ್ ಫಾರ್ಮಾಟ್) ಮತ್ತು ಸ್ಕ್ವ್ಯಾಶ್ ಕೂಡ ಸೇರಿಸಲಾಗುತ್ತಿದೆ.1900ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್:* 1900ರಲ್ಲಿ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ಗೇಮ್ಸ್ನಲ್ಲಿ ಕ್ರಿಕೆಟ್ ಒಂದೇ ಸಲ ಸೇರಿದ್ದೇ. ಗ್ರೇಟ್ ಬ್ರಿಟನ್ ಹಾಗೂ ಫ್ರಾನ್ಸ್ ತಂಡಗಳು ಮಾತ್ರ ಭಾಗವಹಿಸಿದ್ದ ಆ ಕ್ರೀಡಾಕೂಟದಲ್ಲಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದರೆ, ಫ್ರಾನ್ಸ್ ಬೆಳ್ಳಿ ಪದಕ ಪಡೆದಿತ್ತು.2030ರ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಭಾರತ ಪೈಪೋಟಿ :* ಭಾರತ 2030ರ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸಿದ್ದು, ಕೆನಡಾ ಮತ್ತು ನೈಜೀರಿಯಾದೊಂದಿಗೆ ಪೈಪೋಟಿಯಲ್ಲಿದೆ. ಕಾಮನ್ವೆಲ್ತ್ ಸ್ಪೋರ್ಟ್ಸ್ ಸಂಸ್ಥೆಯ ಪ್ರಕಾರ, ಐದು ರಾಷ್ಟ್ರಗಳು ಆತಿಥ್ಯಕ್ಕೆ ಆಸಕ್ತಿ ತೋರಿಸಿವೆ. ಭಾರತ 2010ರಲ್ಲಿ ಕೂಡ ಗೇಮ್ಸ್ ಆತಿಥ್ಯ ವಹಿಸಿತ್ತು, ಆದರೆ ಅಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು.