* ಹಿರಿಯ ರಾಜತಾಂತ್ರಿಕ ಗೌರಂಗಲಾಲ್ ದಾಸ್ ಅವರನ್ನು ದಕ್ಷಿಣ ಕೊರಿಯಾದಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ. ಅವರು ಸೆಪ್ಟೆಂಬರ್ 16, 2025ರಂದು ಈ ನೇಮಕಗೊಂಡಿದ್ದಾರೆ.* 1999ರ ಐಎಫ್ಎಸ್ ಬ್ಯಾಚ್ನ ಅಧಿಕಾರಿ ಆಗಿರುವ ದಾಸ್, ಪ್ರಸ್ತುತ ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೂರ್ವ ಏಷ್ಯಾ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.* ತಮ್ಮ ಹುದ್ದೆಯಲ್ಲಿ, ಅವರು ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆ ನಂತರದ ಸಂಬಂಧ ಪುನರುಜ್ಜೀವನದ ಮಾತುಕತೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.* ಪ್ರಸ್ತುತ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರುವ ದಾಸ್ ಶೀಘ್ರದಲ್ಲೇ ದಕ್ಷಿಣ ಕೊರಿಯಾದಲ್ಲಿ ತಮ್ಮ ಹೊಸ ಹುದ್ದೆಯನ್ನು ಸ್ವೀಕರಿಸಲಿದ್ದಾರೆ ಎಂದು ಎಂಇಎ ತಿಳಿಸಿದೆ.