* ಖ್ಯಾತ ಹೃದ್ರೋಗ ತಜ್ಞ ಉಪೇಂದ್ರ ಕೌಲ್ ಅವರು ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್ ಹಾಗೂ ಕುಲ್ಗಾಮ್ ಜಿಲ್ಲೆಯ ದುರ್ಗಮ ಪ್ರದೇಶಗಳಲ್ಲಿನ ಜನರಿಗೆ ಆರೋಗ್ಯ ಸೇವೆ ಒದಗಿಸಲು ‘ಹಾರ್ಟ್ ಕ್ಲಿನಿಕ್ ಆನ್ ವ್ಹೀಲ್ಸ್’ ಯೋಜನೆಗೆ ಚಾಲನೆ ನೀಡಿದರು.* ಈ ಸಂಚಾರಿ ಕ್ಲಿನಿಕ್ ಮೂಲಕ 5ರಿಂದ 15 ವರ್ಷದ ಮಕ್ಕಳಲ್ಲಿ ಸ್ಥೂಲಕಾಯ, ಸಂಧಿವಾತ ಮತ್ತು ಜನ್ಮಜಾತ ಹೃದಯ ಕಾಯಿಲೆ ಪತ್ತೆಗೆ ಶಾಲಾ ಸಮೀಕ್ಷೆಗಳನ್ನು ನಡೆಸಲಾಗುತ್ತದೆ.* ಇದು ‘ನೋ ಹಾರ್ಟ್ ಅಟ್ಯಾಕ್ ಮಿಷನ್’ ಯೋಜನೆಯ ಭಾಗವಾಗಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಯೋಗದಿಂದ ಗೌರಿ ಕೌಲ್ ಫೌಂಡೇಶನ್ ಇದನ್ನು ಆರಂಭಿಸಿದೆ.* ಕ್ಲಿನಿಕ್ನಲ್ಲಿ ಇಸಿಜಿ, ಪೋರ್ಟಬಲ್ ಎಕೋಕಾರ್ಡಿಯೋಗ್ರಫಿ, ಡಾಪ್ಲರ್, ಮಧುಮೇಹ ಮತ್ತು ಹೃದಯ ಸಂಬಂಧಿತ ಪರೀಕ್ಷಾ ಸಾಧನಗಳು ಲಭ್ಯವಿವೆ.* ಈ ಕ್ಲಿನಿಕ್ ಹೃದಯ ವೈಫಲ್ಯ, ಹೃದಯ ಸ್ನಾಯು ಗಾಯ, ಮಧುಮೇಹ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಪತ್ತೆಹಚ್ಚುವ ತಾಂತ್ರಿಕ ಸೌಲಭ್ಯಗಳೊಂದಿಗೆ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ ದುರ್ಗಮ ಪ್ರದೇಶಗಳಲ್ಲಿ ಸೇವೆ ನೀಡಲಿದೆ.