* ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರು ಟೆಸ್ಟ್‌ ಕ್ರಿಕೆಟ್‌ಗೆ ಜನವರಿ 09 ರಂದು ನಿವೃತ್ತಿ ಘೋಷಿಸಿದ್ದಾರೆ.* ಹರಿಣಗಳ ಬಳಗದಲ್ಲಿ ಮಧ್ಯಮ ಕ್ರಮಾಂಕದ ಪವರ್‌ ಹಿಟ್ಟರ್ ಆಗಿರುವ ಕ್ಲಾಸೆನ್, ದಿಢೀರ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ವೈಟ್ ಬಾಲ್ ತಂಡಕ್ಕೆ ಆಧಾರವಾಗಿ ಮುಂದುವರೆಯಲಿದ್ದಾರೆ.* ಆಫ್ರಿಕಾ ಪರ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾದ ಕ್ಲಾಸೆನ್ ಅವರ ಬ್ಯಾಟ್‌ನಿಂದ ಎಂಟು ಇನ್ನಿಂಗ್ಸ್‌ಗಳಲ್ಲಿ 13.0 ಸರಾಸರಿಯಲ್ಲಿ 104 ರನ್‌ ಗಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಗಳಿಸಿದ್ದ  35 ರನ್ ಗಳಿಸಿದ್ದರು.* 2019 ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಹೆನ್ರಿಕ್ ಕ್ಲಾಸೆನ್ ಅವರು ನಂತರ 2023 ರಲ್ಲಿ 32 ವರ್ಷ ವಯಸ್ಸಿನ ಹೆನ್ರಿಚ್ ಕ್ಲಾಸೆನ್ ಅವರು ಜೋಹಾನ್ಸ್ ಬರ್ಗ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.* ಹೆನ್ರಿಕ್ ಕ್ಲಾಸೆನ್ ಅವರು ಇದುವರೆಗೆ ಆಫ್ರಿಕಾ ಕ್ರಿಕೆಟ್ ತಂಡದ ಪರ ಒಟ್ಟು 54 ಏಕದಿನ ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ.* ಈ ಅವಧಿಯಲ್ಲಿ ಕ್ಲಾಸೆನ್ ಅವರು 50 ಏಕದಿನ ಇನ್ನಿಂಗ್ಸ್‌ಗಳಲ್ಲಿ 40.07 ಸರಾಸರಿಯಲ್ಲಿ 1723 ರನ್ ಮತ್ತು 39 ಟಿ20 ಇನ್ನಿಂಗ್ಸ್‌ಗಳಲ್ಲಿ 22.56 ಸರಾಸರಿಯಲ್ಲಿ 722 ರನ್ ಗಳಿಸಿದರು. ಕ್ಲಾಸೆನ್ ಏಕದಿನದಲ್ಲಿ ನಾಲ್ಕು ಶತಕ ಮತ್ತು ಆರು ಅರ್ಧ ಶತಕಗಳನ್ನು ಸಿಡಿಸಿ ಟಿ20 ಮಾದರಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಸಿಡಿಸಿದ್ದಾರೆ.